ಮುಖ್ಯಮಂತ್ರಿ, ಸಚಿವರು ತಮ್ಮ ಸೊತ್ತು  ಬಹಿರಂಗಪಡಿಸಬೇಕು- ಕೆ. ಸುರೇಂದ್ರನ್

0
34

ಕಾಸರಗೋಡು: ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರುಗಳ ವಿಧಾನ ಸಭಾ ಚುನಾವಣೆಯ ಮೊದಲು ತಮ್ಮ ಆಸ್ತಿ ಬಗ್ಗೆ ಮಾಹಿತಿ ಬಹಿರಂಗ ಪಡಿಸಬೇಕೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಒತ್ತಾಯಿಸಿದ್ದಾರೆ. ಅವರು ಇಂದು ಬೆಳಿಗ್ಗೆ ಕಾಸರಗೋಡು ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡುತ್ತಿದ್ದರು.

ರಾಜ್ಯದಲ್ಲಿ ಎಡರಂಗ ಸರಕಾರ ಭ್ರಷ್ಟಾಚಾರವನ್ನು ಒಂದು ಸಂಸ್ಕೃತಿಯನ್ನಾಗಿ ಮಾಡಿದೆ. ಆಳಕಡಲಿನ ಮೀನುಗಾರಿಕೆ ಒಪ್ಪಂದದಲ್ಲಿ ಭಾರೀ ಭ್ರಷ್ಟಾಚಾರ ಉಂಟಾಗಿದೆ. ಈ ಭ್ರಷ್ಟಾಚಾರವನ್ನು ಉದ್ಯೋಗಿಗಳ ತಲೆಗೆ ಹಾಕಿ ನುಣುಚಿಕೊಳ್ಳಲು ಮುಖ್ಯಮಂತ್ರಿ ಹಾಗೂ ಮೀನುಗಾರಿಕಾ ಸಚಿವ ಯತ್ನಿಸುತ್ತಿದ್ದಾರೆ. ಕಳೆದ ೫ ವರ್ಷಗಳಲ್ಲಿ ವ್ಯಾಪಕವಾಗಿ ಕಪ್ಪು ಹಣ ಕೂಡಿಸಿಟ್ಟ ಸಿಪಿಎಂ ಸರಕಾರ ಹಣ ಬಳಸಲು ಸಹಕಾರಿ ಸಂಘಗಳಲ್ಲಿ ಹಾಗೂ ಇತರ ಸಿಪಿಎಂ ಸಂಸ್ಥೆಗಳನ್ನು ಬಳಸುತ್ತಾರೆ.

ಕಳೆದ ೫ ವರ್ಷಗಳಲ್ಲಿ ಕೇರಳ ವಿಧಾನಸಭಾ ಅಧ್ಯಕ್ಷ ಪಿ. ಶ್ರೀರಾಮಕೃಷ್ಣನ್ ೨೧ ಸಲ ದುಬಾಗೆ ಹೋಗಿ ಬಂದಿದ್ದಾರೆ. ಇವರು ದುಬಾಯ ವಿಧಾನಸಭಾಧ್ಯಕ್ಷೆ ಎಂದು ಕೆ. ಸುರೇಂದ್ರನ್ ಪ್ರಶ್ನಿಸಿದರು. ವಿಜಯ ಯಾತ್ರೆಯು ಇಂದು ಪಯ್ಯನ್ನೂರಿಗೆ ತಲುಪಿದರೆ ಹಿರಿಯ ನೇತಾರ ಶ್ರೀಧರನ್ ಪೊದುವಾಳ್ ಬಿಜೆಪಿಗೆ ಸೇರಲಿದ್ದಾರೆ ಎಂದು ಹೇಳಿದರು.

NO COMMENTS

LEAVE A REPLY