ತಲಪ್ಪಾಡಿ: ಕೇರಳ ಹಾಗೂ ಮಹಾ ರಾಷ್ಟ್ರದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆಯೆಂಬ ನೆಪದಲ್ಲಿ ಜಿಲ್ಲೆಯ ಕರ್ನಾಟಕ ಗಡಿ ಪ್ರದೇಶಗಳಲ್ಲಿ ಇಂದಿ ನಿಂದ ಬಿಗು ತಪಾಸಣೆಯನ್ನು ದಕ್ಷಿಣಕನ್ನಡ ಜಿಲ್ಲಾಡಳಿತ ಆರಂಭಿಸಿದೆ. ಜಿಲ್ಲೆಯ ತಲಪ್ಪಾಡಿ, ಸಾರಡ್ಕ, ನೆಟ್ಟಣಿಗೆ, ಜಾಲ್ಸೂರು ಎಂಬಿಡೆಗಳಲ್ಲಿ ಇಂದು ಬೆಳಗ್ಗಿನಿಂದ ತಪಾಸಣೆ ಆರಂಭವಾಗಿದೆ. ನಾಲ್ಕು ಕಡೆಗಳಲ್ಲಿಯೂ ಆರೋಗ್ಯ ಅಧಿಕಾರಿಗಳು ಕರ್ನಾಟಕ ಪ್ರವೇಶಿಸುವವರ ತಪಾಸಣೆ ನಡೆಸಲಿದ್ದಾರೆಂದು ತಿಳಿದುಬಂದಿದೆ. ನಾಲ್ಕು ಗಡಿಗಳಲ್ಲಿ ಪ್ರಯಾಣಿಕರನ್ನು ತಪಾಸಣೆ ನಡೆಸಿ ಉಳಿದ ಗಡಿಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿಯ ರಾಜೇಂದ್ರನ್ ನಿನ್ನೆ ಹೇಳಿದರು ತಲಪ್ಪಾಡಿಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆಯಿಂದ ಕೋವಿಡ್ ತಪಾಸಣಾ ಕೇಂದ್ರ ಇಂದು ಆರಂಭಗೊಂಡಿದೆ. ಖಾಸಗಿ ವಾಹನಗಳ ಮೂಲಕ ಕರ್ನಾಟಕಕ್ಕೆ ಸಾಗುವ ಪ್ರಯಾಣಿಕರನ್ನು ತಲಪ್ಪಾಡಿಯಲ್ಲಿ ತಪಾಸಣೆ ಮಾಡಲಾಗುವುದು. ಕೇರಳದಿಂದ ಕರ್ನಾಟಕಕ್ಕೆ ಸಂಚರಿಸುವವರ ಗಂಟಲಿನ ದ್ರವ ತೆಗೆದು ಅನಂತರ ವೆನ್ಲಾಕ್ ಆಸ್ಪತ್ರೆಗೆ ಕೊಂಡೊಯ್ದು ತಪಾಸಣೆ ನಡೆಸಲಾಗುತ್ತಿದೆ. ಕೋವಿಡ್ ರೋಗ ಇದ್ದರೆ ಕೂಡಲೇ ಈ ಮಾಹಿತಿಯನ್ನು ರೋಗಿಗಳಿಗೆ ತಿಳಿಸಲಾಗುವುದು ಎಂದು ಕರ್ನಾಟಕ ಆರೋಗ್ಯ ಇಲಾಖೆ ಹೇಳಿದೆ. ಇಂದು ಬೆಳಿಗ್ಗೆ ತಲಪ್ಪಾಡಿ ತಪಾಸಣಾ ಕೇಂದ್ರದ ಬಳಿ ಪತ್ರಕರ್ತರು ಹಾಗೂ ಪೊಲೀಸರ ಮಧ್ಯೆ ವಾಗ್ಯುದ್ಧ ನಡೆಯಿತು.ನಾಳೆಯಿಂದ ಕರ್ನಾಟಕ ಪ್ರವೇಶಿಸುವ ಎಲ್ಲರಿಗೂ ಕೋವಿಡ್ ಪ್ರಮಾಣಪತ್ರ ಕಡ್ಡಾಯವಾಗಿದೆಯೆಂದು ಮಂಗಳೂರು ಜಿಲ್ಲಾಡಳಿತ ಹೇಳಿದೆ.
ಇದೇ ವೇಳೆ ಸ್ಥಳೀಯರಾದ ಹರ್ಷಾದ್ ವರ್ಕಾಡಿ, ಎಕೆಎಂ ಅಶ್ರಫ್ ಬಡಾಜೆ, ಬಷೀರ್ ಕನಿಲ ಸಹಿತಹಲವರು ತಲಪ್ಪಾಡಿಯಲ್ಲಿ ಪ್ರತಿಭಟನೆ ನಡೆಸಿದರು.