ಕೋವಿಡ್ ತಪಾಸಣೆ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಜನರ ನೂಕುನುಗ್ಗಲು

0
69

ಉಪ್ಪಳ:ಕರ್ನಾಟಕ ಪ್ರವೇಶಿಸ ಬೇಕಾದರೆ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಇಂದು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ಜನರು ಭಾರೀ ಸಂಖ್ಯೆಯಲ್ಲಿ  ತಲುಪಿದ್ದಾರೆ. ಇಲ್ಲಿ ಬೆಳಿಗ್ಗಿನಿಂದ ಮಧ್ಯಾಹ್ನ ೧ ಗಂಟೆ ವರೆಗೆ ಕೋವಿಡ್ ತಪಾಸಣೆ ಈ ಹಿಂದೆಯೇ ನಡೆಯುತ್ತಿದೆ. ಆದರೆ ಇದೀಗ ಕೇರಳ ಹಾಗೂ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ತೆರಳುವವರು ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೈವಶವಿರಿಸಿ ಕೊಳ್ಳಬೇಕೆಂಬ  ನಿರ್ದೇ ಶವನ್ನು ಸರಕಾರ ಹೊರಡಿ ಸಿದುದರಿಂದ ಈ ಸರ್ಟಿಫಿಕೇಟ್‌ಗಾಗಿ ಜನರು ಭಾರೀ  ಸಂಖ್ಯೆಯಲ್ಲಿ

ಇಂದು ತಾಲೂಕು ಆಸ್ಪತ್ರೆಗೆ ತಲುಪಿದ್ದಾರೆ.

ಇದರಲ್ಲಿ  ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆ ಯಲ್ಲಿದ್ದಾರೆ. ಇಂದು ೩೦೦ರಷ್ಟು  ಮಂದಿ ಕೋವಿಡ್ ತಪಾಸಣೆಗಾಗಿ ತಲುಪಿದ್ದು, ಆದರೆ ನೂರು ಮಂದಿಯ ತಪಾಸಣೆ  ಮಾತ್ರವೇ ನಡೆಸುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ. ಇದರಿಂದ ಉಳಿದವರು ಭಾರೀ ಸಮಸ್ಯೆ ಎದುರಿಸಬೇಕಾಗಿ ಬರಲಿದೆಯೆಂದು ಹೇಳಲಾಗುತ್ತಿದೆ.

NO COMMENTS

LEAVE A REPLY