ಬಿಜೆಪಿ ವಿಜಯಯಾತ್ರೆ ಕಾಸರಗೋಡಿನಿಂದ ಪ್ರಯಾಣ ಆರಂಭ: ರಾಜ್ಯದ ಜನರನ್ನು ವಿಭಜಿಸಲು ಎಡ-ಬಲ ರಂಗಗಳ ಯತ್ನ-ಯೋಗಿ

0
38

 

ಕಾಸರಗೋಡು: ಕೇರಳದಲ್ಲಿ ಈವರೆಗೆ ಆಡಳಿತ ನಡೆಸಿದ ಎಡ-ಬಲ ರಂಗವು ಜನರನ್ನು ವಿಭಜಿಸಿ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹಿಸಿದೆಯೆಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ  ಹೇಳಿದರು. ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ನೇತೃತ್ವದಲ್ಲಿ ಕಾಸರಗೋಡಿನಿಂದ ಆರಂಭಗೊಂಡ ವಿಜಯಯಾತ್ರೆಯನ್ನು ಉದ್ಘಾಟಿಸಿ ಅನರು ಮಾತನಾಡಿದರು. ನರೇಂದ್ರಮೋದಿ ಭಾರತದ ಅಭಿವೃದ್ಧಿಯ ಬಗ್ಗೆ ಯೋಚಿಸುತ್ತಿರುವಾಗ ಕೇರಳದಲ್ಲಿ  ಶಬರಿಮಲೆಯ ಹೆಸರಲ್ಲಿ  ರಾಜಕೀಯ ಮಾಡಲು ಸಿಪಿಎಂ ಯತ್ನಿಸುತ್ತಿದೆ.  ಉತ್ತರಪ್ರದೇಶದಲ್ಲಿ ೨೪ ಕೋಟಿ ಜನರಿದ್ದು, ಈ ರಾಜ್ಯದಲ್ಲಿ ಕೋವಿಡ್ ರೋಗ ನಿಯಂತ್ರಣದಲ್ಲಿದೆ. ಆದರೆ ಕೇರಳ ಸರಕಾರವು ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ.

ಆಕಾಶದಲ್ಲೂ, ಆಳ ಸಮುದ್ರ ದಲ್ಲೂ, ಭೂಮಿಯಲ್ಲೂ ಭ್ರಷ್ಟಾಚಾರ ನಡೆಸಿ  ಕೇರಳ ಸರಕಾರ  ಲವ್ ಜಿಹಾದ್ ಬಗ್ಗೆ ಕೇರಳ ಸರಕಾರವು ಕ್ರಮ  ಕೈಗೊಂಡರು ಎಂದವರು ಹೇಳಿದರು.

ಬಿಜೆಪಿಯ ಮಾಜಿ ಪ್ರಾಂತ ಅಧ್ಯಕ್ಷ ಹಾಗೂ ಮಿಝೋರಾಂನ  ರಾಜ್ಯಪಾಲರಾಗಿದ್ದ ಕುಮ್ಮನಂ ರಾಜಶೇಖರನ್ ಅಧ್ಯಕ್ಷತೆ ವಹಿಸಿದರು.  ಕೇರಳದ ಚುನಾವಣೆಯ ಸಹಪ್ರಭಾರಿ, ಕಾರ್ಕಳ ಶಾಸಕ ಸುನಿಲ್ ಕುಮಾರ್, ನೇಮಂ ಶಾಸಕ ಒ. ರಾಜಗೇಪಾಲ್, ಕೇಂದ್ರ ವಿದೇಶ ಸಹಾಯಕ ಸಚಿವ ವಿ. ಮುರಳೀಧರನ್,   ನೇತಾರರಾದ ಸಿ.ಕೆ. ಪದ್ಮನಾಭನ್, ವಿ. ಮುರಳೀಧರನ್, ನೇತಾರರಾದ ಸಿ.ಕೆ. ಪದ್ಮನಾಭನ್, ಪಿ.ಕೆ. ಕೃಷ್ಣದಾಸ್, ವಿಜಯ ಯಾತ್ರೆಯ ಸಂಚಾಲಕ ಎಂ.ಟಿ. ರಮೇಶ್, ಎನ್‌ಡಿಎ ಸಂಚಾಲಕ ತುಷಾರ್ ವೆಳ್ಳಾಪಳ್ಳಿ, ಶೋಭಾ ಸುರೇಂದ್ರನ್ ಮೊದಲಾದವರು ಮಾತನಾಡಿದರು. ನೇತಾರರಾದ ಸದಾನಂದ ಮಾಸ್ತರ್, ಮಾಜಿ ಸಚಿವ ಪಿ.ಸಿ. ಥೋಮಸ್,  ಕೃಷ್ಣ ಕುಮಾರ್, ಪ್ರಮಿಳಾ ಸಿ. ನಾಯ್ಕ್,  ಎ. ಬಾಲಕೃಷ್ಣ ಶೆಟ್ಟಿ, ಸುರೇಶ್ ಕುಮಾರ್ ಶೆಟ್ಟಿ, ಸುಧಾಮ ಗೋಸಾಡ ಸಹಿತ ಹಲವರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಸ್ವಾಗತಿಸಿದರು.

ಕಾಸರಗೋಡು ಜಿಲ್ಲೆ, ಮಂಗಳೂರು ಸಹಿತ ವಿವಿಧ ಕಡೆಗಳಿಂದ ಹರಿದು ಬಂದ ಜನಸಾಗರ ತಾಳಿಪಡ್ಪು ಮೈದಾನವನ್ನು ಕೇಸರಿ ಕಡಲನ್ನಾಗಿಸಿತು.

ಮಂಗಳೂರು ವಿಮಾನ ನಿಲ್ದಾಣ ದಲ್ಲಿ ಬಂದಿಳಿದ ಯೋಗಿ ಆದಿತ್ಯನಾಥ್ ಅನಂತರ ಕಾರು ಮೂಲಕ ಕಾಸರೋಡಿಗೆ ತಲುಪಿದರು. ಜೆಡ್ ಕ್ಯಾಟಗರಿ  ಭದ್ರತೆ ಹೊಂದಿರುವ ವ್ಯಕ್ತಿ ಎಂಬ ಹಿನ್ನೆಲೆಯಲ್ಲಿ ಯೋಗಿ ಅವರ ಭೇಟಿಯ ಅಂಗವಾಗಿ ಬಿಗಿ  ಪೊಲೀಸ್ ಪಹರೆ ಏರ್ಪಡಿಸಲಾ ಗಿತ್ತು. ಉತ್ತರಪ್ರದೇಶ ಪೊಲೀಸರು, ಎಸ್‌ಪಿಜಿ ಎಂಬಿವರು ಜಂಟಿಯಾಗಿ ಪಹರೆ ಏರ್ಪಡಿಸಿತ್ತು. ಕೇರಳ ಪೊಲೀಸರು ತಾಳಿಪಡ್ಪು ಮೈದಾನದ ನಿಯಂತ್ರಣ ವಶಕ್ಕೆ ತೆಗೆದಿದ್ದು, ವಿಜಯಯಾತ್ರೆಯ ಹಿನ್ನೆಲೆಯಲ್ಲಿ ವಿವಿಧೆಡೆ ಟ್ರಾಫಿಕ್ ನಿಯಂತ್ರಣ ಏರ್ಪಡಿಸಿದ್ದರು.

ವಿಜಯಯಾತ್ರೆಯು ಇಂದು ಕಾಲಿಕಡವು ಮೂಲಕ ಕಣ್ಣೂರು ಜಿಲ್ಲೆ ಪ್ರವೇಶಿಸಲಿದೆ. ವಿವಿಧ ಕಡೆಗಳಲ್ಲಿ  ಪ್ರಯಾಣಿಸಿ ಮಾರ್ಚ್ ೭ರಂದು ತಿರುವ ನಂತಪುರದಲ್ಲಿ ಸಮಾರೋಪಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ಷಾ ಭಾಗವಹಿಸುವರು.

NO COMMENTS

LEAVE A REPLY