ಬಾವಿಗೆ ಬಿದ್ದು ಮಹಿಳೆ ಮೃತ್ಯು

0
47

ಮೀಯಪದವು: ಮಜಿಬೈಲ್ ಮಾಟೆಮಾರ್‌ನಲ್ಲಿ  ಗೃಹಿಣಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಿನ್ನೆ ಸಂಭವಿಸಿದೆ. ಮಾಟೆಮಾರ್ ನಿವಾಸಿ ಕೊಲ್ಲಿಯಲ್ಲಿ ಉದ್ಯೋಗಿಯಾಗಿರುವ ಮೊಹಮ್ಮದ್‌ರ ಪತ್ನಿ ಸಮೀಮ (೫೧) ಮತಪಟ್ಟವರು. ನಿನ್ನೆ ಮನೆಯಲ್ಲಿ ಇವರು ಒಂಟಿಯಾಗಿ ದ್ದಾಗ ಬಾವಿ ಪರಿಸರವನ್ನು ಶುಚಿಗೊಳಿಸುತ್ತಿದ್ದರೆನ್ನ ಲಾಗಿದೆ. ಈ ವೇಳೆ ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ.

ಸಂಜೆ ವೇಳೆ ಮಕ್ಕಳು ಮನೆಗೆ ಬಂದಾಗ ತಾಯಿಯನ್ನು ಕಾಣದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಬಾವಿಯಲ್ಲಿ ಪತ್ತೆಯಾಗಿದ್ದಾರೆ. ಆದರೆ  ಆ ವೇಳೆಗೆ ಮೃತಪಟ್ಟಿದ್ದರು. ಬಳಿಕ ಸ್ಥಳೀಯರು ಸೇರಿ ಮೃತದೇಹವನ್ನು ಮೇಲೆತ್ತಲಾಗಿದೆ.

ಮೃತರು ಪತಿ, ಕಂದೆ ಅಬ್ದುಲ್ಲ, ತಾಯಿ ಬೀಫಾತಿಮ್ಮ, ಮಕ್ಕಳಾದ ರಹಿಯಾನ, ಹಾಜಿರ, ರಾಶಿದ್, ಅಳಿಯ ಹನೀಫ್, ಸಹೋದರರಾದ ಹಮೀದ್, ಅಶ್ರಫ್, ರಜಾಕ್, ಸಹೋದರಿ ಸಾರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY