ಗಡಿ ಪ್ರದೇಶಗಳಲ್ಲಿ ಕೋವಿಡ್  ತಪಾಸಣೆಗೆ ಎರಡು  ದಿನಗಳ ಸಡಿಲಿಕೆ

0
73

ಕಾಸರಗೋಡು: ಗಡಿಪ್ರದೇಶದಲ್ಲಿ ಕೋವಿಡ್ ತಪಾಸಣೆ ನಡೆಸಬೇಕೆಂಬ ದಕ್ಷಿಣಕನ್ನಡ ಜಿಲ್ಲಾಡಳಿತದ ನಿರ್ಧಾರಕ್ಕೆ ಎರಡು ದಿನಗಳ ಸಡಿಲಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ.

ಕೇರಳದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹೊಂದಿಕೊಂಡಿರುವಂತಹ ನಾಲ್ಕು ಗಡಿಗಳಲ್ಲಿ ತಪಾಸಣೆ ಬಿಗುಗೊಳಿಸಲು ಹಾಗೂ ಉಳಿದ ಗಡಿಗಳನ್ನು ಮುಚ್ಚಲು ದಕ್ಷಿಣಕನ್ನಡ ಜಿಲ್ಲಾಡಳಿತ  ನಿರ್ಧರಿ ಸಿತ್ತು. ತಲಪ್ಪಾಡಿ, ಸಾರಡ್ಕ, ಜಾಲ್ಸೂರು, ನೆಟ್ಟಣಿಗೆ ಎಂಬೀ ಕಡೆಗಳಲ್ಲಿ ಕೇರಳ ದಿಂದ ಕರ್ನಾಟಕ ಭಾಗಕ್ಕೆ ಪ್ರವೇಶಿಸು ವವರಿಗೆ ಕೋವಿಡ್ ಪರೀಕ್ಷೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ನಿನ್ನೆ ತಲಪಾಡಿ ಮೂಲಕ ಖಾಸಗಿ ವಾಹನಗ ಳಲ್ಲಿ ಕರ್ನಾಟಕಕ್ಕೆ ಸಾಗುವ ಪ್ರಯಾಣಿಕರ ಪರೀಕ್ಷೆಯೂ ಆರಂಭಗೊಂಡಿತ್ತು. ಇಂದಿನಿಂದ ಬಸ್ ಪ್ರಾಣಿಕರ ಪರಿ ಶೋಧನೆಯೂ ನಡೆಸಲಾಗುವುದೆಂದು ಘೋಷಿಸಲಾಗಿತ್ತು.

ದಕ್ಷಿಣಕನ್ನಡ ಜಿಲ್ಲಾಡಳಿತ ನಿರ್ಧಾರದ ವಿರುದ್ಧ ವಿವಿಧ ರಾಜಕೀಯ ಪಕ್ಷಗಳು ನಿನ್ನೆ ತಲಪ್ಪಾಡಿಯಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯತ್ ಆಡಳಿತವು ನಿನ್ನೆ ಸಭೆ ಸೇರಿ ದಕ್ಷಿಣಕನ್ನಡ ಜಿಲ್ಲಾಡಳಿತದ ನಿರ್ಧಾರವನ್ನು ಪುನಃ ಪರಿಶೀಲಿಸಬೇಕು, ಎಣ್ಮಕಜೆ ಗ್ರಾಮ ಪಂಚಾಯತ್‌ನಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ರೋಗಿಗಳಿಲ್ಲ ಎಂದು ಮನವಿ ಮಾಡಿದೆ. ಕರ್ನಾಟಕದ ಮುಖ್ಯಮಂತ್ರಿ, ಆರೋಗ್ಯ ಮಂತ್ರಿ ಎಂಬಿವರಿಗೆ ಮನವಿ ಸಲ್ಲಿಸಿದೆ.  ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಐ. ಸುಬ್ಬಯ್ಯ ರೈ, ಕರ್ನಾಟಕ ಹೈಕೋರ್ಟ್ ನಲ್ಲಿ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಬಿಜೆಪಿ ಕಾಸರಗೋಡು  ಜಿಲ್ಲಾ ಸಮಿತಿ, ಕರ್ನಾಟಕ ಮುಖ್ಯಮಂತ್ರಿಯವರನ್ನು ಸಂಪರ್ಕಿಸಿ, ಗಡಿ ಬಂದ್ ತೆರವು ಗೊಳಿಸಲು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಸಡಿಲಿಕೆ ಲಭಿಸಿದೆ. ಮುಂದಿನ ದಿನಗಳಲ್ಲಿ ಕೇರಳ-ಕರ್ನಾಟಕ ಸರಕಾರಗಳು ಪರಸ್ಪರ ಮಾತುಕತೆ ನಡೆಸಲಿದೆ.

NO COMMENTS

LEAVE A REPLY