ಅರ್ಧ ಕಿಲೋ ಗಾಂಜಾ, ೧೦ ಸಾವಿರ ರೂ., ಕಾರು, ತಕ್ಕಡಿ ವಶ; ಸಾಗಾಟಗಾರ ಪರಾರಿ

0
82

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಅರ್ಧ ಕಿಲೋ ಗಾಂಜಾ, ೧೦ ಸಾವಿರ ರೂ. ಎಂಬಿವುಗಳನ್ನು ವಿದ್ಯಾನಗರ ಇನ್ಸ್‌ಪೆಕ್ಟರ್ ಶ್ರೀಜಿತ್ ಕೋಡೇರಿಯವರ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿದ್ದ ಆರೋಪಿ ಓಡಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಚೆರ್ಕಳ- ಬದಿಯಡ್ಕ ರಸ್ತೆಯ ಕೆಟ್ಟುಂಕಲ್ಲ್ ಬಳಿ ನಿನ್ನೆ ವಾಹನ ತಪಾಸಣೆ ವೇಳೆ ಶಂಕಿತ ರೀತಿಯಲ್ಲಿ ಬಂದ ಕಾರನ್ನು ನಿಲ್ಲಿಸಲು ಸೂಚಿಸಿಯೂ ಅದು ನಿಲ್ಲಿಸದೆ ಪರಾರಿಯಾಯಿತು. ಅದನ್ನು ಪೊಲೀಸರು ಬೆನ್ನಟ್ಟಿದ್ದು, ಸ್ವಲ್ಪ ದೂರದಲ್ಲಿ ಕಾರು ನಿಂತಿದ್ದು, ಕಾರಿನಲ್ಲಿದ್ದವ ಓಡಿ ಪರಾರಿಯಾಗಿದ್ದಾನೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಅರ್ಧ ಕಿಲೋ ಗಾಂಜಾ, ೧೦ ಸಾವಿರ ರೂ, ಗಾಂಜಾ ಅಳತೆಗೆ ಬಳಸುವ ತಕ್ಕಡಿ ಎಂಬಿವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶದಿಂದ ತಂದು ವಿವಿಧ ಕಡೆಗಳಿಗೆ ಗಾಂಜಾ ಪೂರೈಸುವ ತಂಡದ ಮುಖ್ಯ ಸೂತ್ರಧಾರ ಈತನೆಂದು ಪೊಲೀಸರು ಹೇಳುತ್ತಾರೆ. ಆರೋಪಿಗಳ ಪತ್ತೆಗಾಗಿ ನಾರ್ಕೋಟಿಕ್ ಸೆಲ್‌ನ ಸಹಾಯ ಪಡೆಯಲಾಗಿದೆ. ಆರೋಪಿಯನ್ನು ಒಂದೆರಡು ದಿನಗಳೊಳಗೆ ಸೆರೆ ಹಿಡಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

NO COMMENTS

LEAVE A REPLY