ತಲಪಾಡಿ ಗಡಿಯಲ್ಲಿ ಕರ್ನಾಟಕ ನಿಯಂತ್ರಣ: ಸಾರ್ವಜನಿಕ ಹಿತಾಸಕ್ತಿ ಅರ್ಜಿ ನಾಳೆ ನ್ಯಾಯಾಲಯ ಪರಿಗಣನೆ ಸಾಧ್ಯತೆ

0
113

ಮಂಜೇಶ್ವರ: ತಲಪಾಡಿ ಅಂತಾ ರಾಜ್ಯ ಚೆಕ್‌ಪೋಸ್ಟ್‌ನಲ್ಲಿ ನಿಯಂತ್ರಣ ಏರ್ಪಡಿಸಬಾರದೆಂದು ಆಗ್ರಹಿಸಿ ಡಿಸಿಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ  ಸುಬ್ಬಯ್ಯ ರೈ ಕರ್ನಾಟಕ ಹೈಕೋರ್ಟ್‌ನಲ್ಲಿ  ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತ್ತಿ ಅರ್ಜಿಯನ್ನು ನ್ಯಾಯಾಲಯ ನಾಳೆ ಪರಿಗಣಿಸುವ ಸಾಧ್ಯತೆಯಿದೆ.

ಮೊನ್ನೆ ಫೈಲ್ ಮಾಡಿದ ಅರ್ಜಿ ಯನ್ನು ಇದುವರೆಗೆ ಲಿಸ್ಟ್ ಮಾಡದ ಕಾರಣ ಇದುವರೆಗೆ ಪರಿಗಣಿಸಲಾಗಿಲ್ಲ. ಸಾರಿಗೆಗೆ ತಡೆದರೆ ಉಂಟಾಗಬಹುದಾದ ಗಂಭೀರ ಸಂದಿಗ್ಧತೆಗಳ ಬಗ್ಗೆ ಹೆಚ್ಚಿನ ಪುರಾ ವೆಗಳನ್ನು ಸುಬ್ಬಯ್ಯ ರೈ ಇಂದು ನ್ಯಾಯಾ ಲಯಕ್ಕೆ ಹಾಜರುಪಡಿಸುವರು. ಕರ್ನಾಟಕ ಹೈಕೋರ್ಟ್‌ನ ಚೀಫ್ ಜಸ್ಟೀಸ್‌ರ ಪೀಠ ಅರ್ಜಿಯ ಪರಿಗಣನೆ ನಡೆಸಲಿದೆ.

ಕೋವಿಡ್‌ನ  ಹಿನ್ನೆಲೆಯಲ್ಲಿ ಕೇಂದ್ರ ಸರಕಾರ  ಘೋಷಿಸಿದ ಲಾಕ್‌ಡೌನ್‌ನ ನಿರ್ದೇಶಗಳಿಗೆ ವಿರುದ್ಧವಾಗಿ  ಕರ್ನಾಟಕ ಗಡಿಯಲ್ಲಿ ಸಾರಿಗೆ ಸಂಚಾರಕ್ಕೆ  ರಾಜ್ಯ ಸರಕಾರ ನಿಯಂತ್ರಣ ಏರ್ಪಡಿಸಿರುವುದಾಗಿ  ಸುಬ್ಬಯ್ಯ ರೈ ನ್ಯಾಯಾಲಯದಲ್ಲಿ ತಿಳಿಸಿ ದ್ದಾರೆ. ಈ ಬಗ್ಗೆ ಕೇಂದ್ರ ನಿರ್ದೇಶದ ೮ನೇ ಪ್ಯಾರಾದಲ್ಲಿ ಅಂತರ್ ರಾಜ್ಯ ಸಾರಿಗೆ ಸಂಚಾರಕ್ಕೆ ಲಾಕ್‌ಡೌನ್  ತಡೆಯ ಬಾರದೆಂದು ಪ್ರತ್ಯೇಕವಾಗಿ ಹೇಳಲಾಗಿ ದೆಯೆಂದು ಅರ್ಜಿಯಲ್ಲಿ ಅವರು ತಿಳಿಸಿದ್ದಾರೆ.  ತಲಪಾಡಿಯಿಂದ ಸುಳ್ಯ ವರೆಗೆ  ನೂರು ಕಿಲೋ ಮೀಟರ್ ಗಡಿ ಪ್ರದೇಶದಲ್ಲಿ ನಾಲ್ಕು ರಸ್ತೆಗಳನ್ನು ಹೊರತು ಪಡಿಸಿ ಇತರ ಎಲ್ಲಾ ಕಡೆ ಮುಚ್ಚಲು ಇರುವ ನಿರ್ದೇಶ ಕೇಂದ್ರಸರಕಾರದ ನಿಬಂಧನೆಗಳಿಗೆ  ವಿರುದ್ಧವಾಗಿದೆಯೆಂದು ಅವರು ಅಭಿಪ್ರಾಯಪಟ್ಟರು.

ಇದೇ ವೇಳೆ ತಲಪಾಡಿಯಲ್ಲಿ ಇಂದು ವಾಹನಗಳು ಎಂದಿನಂತೆ ಸಂಚರಿ ಸುತ್ತಿವೆ. ದ್ವಿಚಕ್ರ ವಾಹನ ಸವಾರರನ್ನು ಪೊಲೀಸರು ತಡೆದು ನಿಲ್ಲಿಸಿ ನಾಳೆಯಿಂದ ಈ ದಾರಿಯಾಗಿ ಕೋವಿಡ್ ನೆಗೆಟಿವ್ ವರದಿ ಇಲ್ಲದೆ ಪ್ರಯಾಣ ಮಾಡಬಾರ ದೆಂದು  ತಿಳಿಸಿ ಬಿಡುತ್ತಾರೆ. ಕರ್ನಾಟಕ ಚೆಕ್‌ಪೋಸ್ಟ್‌ನಿಂದ ಆಚೆಕಡೆ ಕರ್ನಾಟಕ ಆರೋಗ್ಯ ಇಲಾಖೆ ಆರ್‌ಟಿಪಿಸಿಆರ್, ಆಂಟಿಜೆನ್ ಟೆಸ್ಟ್ ಮುಂದುವರಿಸುತ್ತಿದೆ. ನಿನ್ನೆ ಹಾಗೂ ಮೊನ್ನೆ ಮೊದಲ ಸಾವಿರ ಮಂದಿ ಇಲ್ಲಿ ತಪಾಸಣೆಗೆ ವಿಧೇ ಯರಾಗಿದ್ದಾರೆ. ಮಂಗಳೂರಿನಿಂದ ಕಾಸರಗೋಡಿಗೆ ಬರುವ ಪ್ರಯಾಣಿಕರಿಗೆ ಕೋಟೆಕ್ಕಾರಿನಲ್ಲೂ, ಕರ್ನಾಟಕ ಸರಕಾರ ಕೋವಿಡ್ ತಪಾಸಣೆ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಪ್ರಯಾಣಿಕರ ತಪಾಸಣೆಯನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಿ ರೋಗ ಬಾಧಿತರಿಗೆ ಮಾಹಿತಿ ನೀಡಲಾಗುತ್ತಿದೆ. ರೋಗ ಬಾಧಿತರ ಮೊಬೈಲ್‌ಗೆ ಮಾಹಿತಿ ರವಾನಿಸಲಾಗುವುದು.  ತಲಪಾಡಿಯ ತಪಾಸಣಾ ಕೇಂದ್ರದಲ್ಲಿ ಇಂದು ಕೂಡಾ ಹಲವಾರು ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಇದೇ ವೇಳೆ ಮಂಜೇಶ್ವರ  ತಾಲೂಕು ಆಸ್ಪತ್ರೆಯಲ್ಲಿ  ಕೋವಿಡ್ ಟೆಸ್ಟ್ ಕೇಂದ್ರಕ್ಕೆ ಇಂದು ಬೆಳಿಗ್ಗೆ ೧೦.೧೫ರ ವೇಳೆಗೆ ತಪಾಸಣೆಗಾಗಿ ತಲುಪಿದಾಗ ಅಲ್ಲಿ ಅಧಿಕಾರಿಗಳು ಇಲ್ಲದ ಕಾರಣ ಜನರು ಕಾಯಬೇಕಾಯಿತು.  ಜಿಲ್ಲೆಯ ಸಾರಡ್ಕ, ಜಾಲ್ಸೂರು, ನೆಟ್ಟಣಿಗೆ ಎಂಬೆಡೆಗಳಲ್ಲೂ ಇಂದು ಯಾವುದೇ ನಿಯಂತ್ರಣ ಇಲ್ಲವೆಂದು ಸ್ಥಳೀಯರು ಹೇಳಿದ್ದಾರೆ. ಪೆರ್ಲ-ಸ್ವರ್ಗ-ಪಾಣಾಜೆ ರಸ್ತೆಯಲ್ಲಿ ಸಂಚಾರ ಸುಗಮವಾಗಿದೆ. ಆದರೆ ಒಡ್ಯ, ಸುಳ್ಯ ಗ್ರಾಮೀಣ ರಸ್ತೆಗಳನ್ನು ಬಂದ್ ಮಾಡಲಾಗಿದೆ.

NO COMMENTS

LEAVE A REPLY