ಕೃಷಿಕನ ಮೃತದೇಹ ಕೊಳದಲ್ಲಿ ಪತ್ತೆ

0
84

ಬೋವಿಕ್ಕಾನ: ಕೃಷಿಕನೋರ್ವರ ಮೃತದೇಹ ಮನೆ ಬಳಿಯ ಕೊಳದಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.   ಬೇಡಡ್ಕ ಕಳವಯಲ್ ಬಳಿಯ ಕರಿಂಬಂಗಾನದ ನಿವಾಸಿ ಬಾಲಕೃಷ್ಣ ಭಟ್ (೫೭)ರ ಮೃತದೇಹ ಮನೆ ಸಮೀಪದ ಅಡಿಕೆ ತೋಟದಲ್ಲಿರುವ ಕೊಳದಲ್ಲಿ ಪತ್ತೆಯಾಗಿದೆ. ಬೆಳಿಗ್ಗೆ ಮನೆಯಿಂದ ತೋಟಕ್ಕೆಂದು ಹೋಗಿದ್ದ ಇವರು ಹಿಂತಿರುಗದೆ ಇದ್ದಾಗ ಹುಡುಕಾಟದ ವೇಳೆ ಮೃತದೇಹ ಕೊಳದಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕದಳ, ಪೊಲೀಸರು, ಸ್ಥಳೀಯರು ಸೇರಿ  ಮೃತದೇಹವನ್ನು ಮೇಲಕ್ಕೆತ್ತಿದರು. ಮೃತರು ಪತ್ನಿ ರಾಧಿಕಾ, ಪುತ್ರಿ ಪ್ರಜ್ವಲ್, ಸಹೋದರ-ಸಹೋದರಿಯರಾದ ನಾಗರಾಜ ಭಟ್, ಗೋವಿಂದ ಶರ್ಮ,  ಉಷಾ, ಶಶಿಪ್ರಭಾ, ಆಶಾ, ವೀಣಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY