ಕೋವಿಡ್: ಕೇರಳೀಯರಿಗೆ ಐದು ರಾಜ್ಯಗಳಲ್ಲಿ ನಿಯಂತ್ರಣ

0
85

ಕಾಸರಗೋಡು: ಕೋವಿಡ್ ಬಾಧಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳೀಯರಿಗೆ ಕರ್ನಾಟಕದ ಬೆನ್ನಲ್ಲೇ ಇನ್ನು ನಾಲ್ಕು ರಾಜ್ಯಗಳು ನಿಯಂತ್ರಣ ಹೇರಿವೆ. ಉತ್ತರಾಖಂಡ್, ಮಣಿಪುರ, ಮಹಾರಾಷ್ಟ್ರ, ದೆಹಲಿ  ಎಂಬೀ ರಾಜ್ಯಗಳಲ್ಲಿ ಇದೀಗ ನಿಯಂತ್ರಣ ಹೇರಲಾಗಿದೆ.  ಕೋವಿಡ್ ತಪಾಸಣೆ ಫಲಿತಾಂಶ ನೆಗೆಟಿವ್ ಆದವರು ಮಾತ್ರವೇ ಬಂದರೆ ಸಾಕೆಂದು ಈ ರಾಜ್ಯಗಳು ತಿಳಿಸಿವೆ. ಕೇರಳ, ಗೋವಾ, ಗುಜರಾತ್, ರಾಜಸ್ತಾನ, ದೆಹಲಿ ಎಂಬಿಡೆಗಳಿಂದ ಬರುವವರು ಆರ್‌ಟಿಪಿಸಿಆರ್  ನೆಗೆಟಿವ್ ರಿಪೋ ರ್ಟ್ ಕೈವಶವಿರಿಸಿಕೊಳ್ಳಬೇಕೆಂದು ನಿಯಂತ್ರಣ ಹೇರಿದ ರಾಜ್ಯಗಳು   ತಿಳಿಸಿವೆ.  ರೋಗ ಬಾಧಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಒಡಿಸ್ಸಾ, ಜಮ್ಮು-ಕಾಶ್ಮೀರ  ಎಂಬಿಡೆಗಳಲ್ಲೂ ಕೆಲವು ನಿಯಂತ್ರಣ ಏರ್ಪಡಿಸಲಾಗಿದೆ. ಭಾರತದಲ್ಲಿ ನಿನ್ನೆ ೧೩,೦೦೦ಕ್ಕಿಂತ ಹೆಚ್ಚು ಮಂದಿಗೆ ಕೋವಿಡ್ ಬಾಧಿಸಿರುವುದಾಗಿ ಖಚಿತಪಡಿಸಲಾಗಿದೆ.

NO COMMENTS

LEAVE A REPLY