ಆಡುಗಳ ಸಾವು: ಕೇಸು ದಾಖಲು

0
58

ಕುಂಬಳೆ: ಮೇಯಲು ಬಿಟ್ಟ ಆರು ಆಡು ಸಾವನ್ನಪ್ಪಿದ ಪ್ರಕರಣದಲ್ಲಿ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಟ್ಟತ್ತಡ್ಕ ವಿಕಾಸನಗರದ ಖಾದರ್‌ರ ದೂರಿನಂತೆ ಕೇಸು ದಾಖಲಿಸಲಾ ಗಿದೆ. ಖಾದರ್ ತಮ್ಮ ೭ ಆಡು ಗಳನ್ನು ಗುರುವಾರದಂದು ಮೇಯಲು  ಬಿಟ್ಟರು, ಅದರಲ್ಲಿ ಆರು ಆಡುಗಳು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದವು. ಯಾರೋ ಗುಡ್ಡೆಯಲ್ಲಿ ಇಟ್ಟ ವಿಷ ತಿಂದು ಆಡುಗಳು ಸತ್ತಿರಬಹುದೆಂದು ಶಂಸಯಿಸಲಾಗಿದೆ.

NO COMMENTS

LEAVE A REPLY