ಎಸ್.ವೈ.ಎಸ್‌ನಲ್ಲಿ ಶಿಸ್ತು ಕ್ರಮ: ಮೂವರು ಜಿಲ್ಲಾ ಪದಾಧಿಕಾರಿಗಳಿಗೆ ಶೋಕಾಸ್ ನೋಟೀಸು

0
47

ಕಾಸರಗೋಡು: ಸಮಸ್ತ ಕೇರಳ ಸುನ್ನಿ ಯುವಜನಸಂಘ ಶಿಸ್ತು ಕ್ರಮಗಳ ಅಂಗವಾಗಿ ಮೂವರು ನೇತಾರರಿಗೆ ಶೋಕಾಸ್ ನೋಟೀಸ್ ನೀಡಿದೆ.

ಸಂಘಟನೆಯ ಜಿಲ್ಲಾ ಸಮಿತಿ ಪದಾಧಿಕಾರಿ ಸ್ಥಾನದಿಂದ ಹೊರ ಹಾಕದಿರಲು ಕಾರಣವಿದ್ದರೆ ಆ ಬಗ್ಗೆ ಕೂಡಲೇ ತಿಳಿಸಬೇಕೆಂದು ನಿರ್ದೇಶಿಸಿ ಶೋಕಾಸ್ ನೋಟೀಸು ನೀಡಲಾಗಿದೆ. ಎಸ್.ವೈ.ಎಸ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಪ್ರಸ್ತುತ ಉಪಾಧ್ಯಕ್ಷರಾಗಿರುವ ಅಬೂಬಕರ್ ಸಾಲೂದ್ ನಿಸಾಮಿ, ಇನ್ನೋರ್ವ ಉಪಾಧ್ಯಕ್ಷರಾದ ಎಸ್.ಪಿ. ಸಲಾವುದ್ದೀನ್ ಮೊಗ್ರಾಲ್ ಪುತ್ತೂರು, ಎಂ.ಎ. ಖಲೀಲ್ ಮುಟ್ಟತ್ತೋಡಿ ಎಂಬಿವರಿಗೆ ನೋಟೀಸು ನೀಡಿರುವುದಾಗಿ ಜಿಲ್ಲಾ ಪದಾಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ನಡೆದ ಜಿಲ್ಲಾ ನಿರ್ವಾಹಕ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಂಡಿರುವುದಾಗಿಯೂ ತಿಳಿಸಲಾಗಿದೆ. ಎಸ್.ವೈ.ಎಸ್ ಕುಂಬಳೆ ವಲಯ ಸಮಿತಿಯ ವಿನಂತಿ ಮೇರೆಗೆ ಇನ್ನೋರ್ವ ಜಿಲ್ಲಾ ಉಪಾಧ್ಯಕ್ಷರಾದ ಕಣ್ಣೂರು ಅಬ್ದುಲ್ಲರನ್ನು ಪದಾಧಿಕಾರಿ ಸ್ಥಾನದಿಂದ ತೆರವುಗೊಳಿಸಲು ಸಭೆ ನಿರ್ಧರಿಸಿದ್ದು, ಆ ಬಗ್ಗೆ ರಾಜ್ಯ ಸಮಿತಿಗೆ ತಿಳಿಸಿರುವುದಾಗಿ ವಕ್ತಾರರು ತಿಳಿಸಿದ್ದಾರೆ.

NO COMMENTS

LEAVE A REPLY