ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

0
65

ಉಪ್ಪಳ: ಅಪಘಾತದಿಂದ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವ್ಯಕ್ತಿ ನಿನ್ನೆ ಮೃತಪಟ್ಟಿದ್ದಾರೆ. ಬಾಯಿಕಟ್ಟೆ ಪಳ್ಳ ನಿವಾಸಿ ಶ್ರೀಪತಿ ಭಟ್ (೭೦) ನಿಧನ ಹೊಂದಿದವರು. ಈ ತಿಂಗಳ ೧೮ರಂದು ಬೆಳಿಗ್ಗೆ ಬಾಯಿಕಟ್ಟೆಗೆಂದು ತೆರಳಿದ್ದ ಶ್ರೀಪತಿ ಭಟ್‌ಗೆ ಕಳಾಯಿ ಜಂಕ್ಷನ್‌ನಲ್ಲಿ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಗಾಯಗೊಂಡಿದ್ದರು. ತಲೆಗೆ ಗಂಭೀರ ಗಾಯವಾಗಿದ್ದ ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮೃತರು ಪತ್ನಿ ಹೇಮಾವತಿ, ಪುತ್ರ ವಿಷ್ಣು ಕುಮಾರ್, ಸೊಸೆ ಶೀಲಾ, ಸಹೋದರ ಗೋಪಾಲಕೃಷ್ಣ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮಂಜೇಶ್ವರ ಪೊಲೀಸರು  ಪ್ರಕರಣ ದಾಖಲಿಸಿದ್ದಾರೆ. ಪರಾರಿ ಯಾಗಿರುವ ದ್ವಿಚಕ್ರ ವಾಹನದ ಪತ್ತೆಗೆ ಚಾಲನೆ ನೀಡಿದ್ದಾರೆ.

NO COMMENTS

LEAVE A REPLY