ವಿಧಾನಸಭಾ ಚುನಾವಣೆ: ಸಾರ್ವಜನಿಕ ಗದ್ದಲವಿಲ್ಲ:  ಸಭೆ ಸಮಾರಂಭಗಳಿಗೆ ನಿಶ್ಚಿತ ಮೈದಾನಗಳು

0
47

ಕಾಸರಗೋಡು: ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಪ್ರಚಾರದಲ್ಲಿ ನಿಶ್ಚಿತ ಮೈದಾನಗಳನ್ನು ಮಂಜೂರು ಮಾಡಲಾಗುತ್ತಿದೆ. ಚುನಾವಣಾ ಪ್ರಚಾರ, ಸಾರ್ವಜನಿಕ ಸಭೆ ಇತ್ಯಾದಿಗಳಿಗಾಗಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಲ್ಲಿ ೫ರಂತೆ ಮೈದಾನಗಳನ್ನು ಆರಿಸಿ, ಜಿಲ್ಲಾಧಿಕಾರಿ ಸುತ್ತೋಲೆ ಹೊರಡಿಸಿದ್ದಾರೆ. ಅಭ್ಯರ್ಥಿಗಳು ಬೇಡಿಕೆಯಿಟ್ಟ ಪ್ರಕಾರ ಚುನಾವಣಾ ಅಧಿಕಾರಿ ಮೈದಾನವನ್ನು ಬಿಟ್ಟು ಕೊಡಬಹುದಾಗಿದೆ. ಅದರಂತೆ ಮಂಜೇಶ್ವರ, ವಿಧಾನಸಭಾ ಮಂಡಲದಲ್ಲಿ ಮಣ್ಣಂಗುಯಿ ಮೈದಾನ, ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಪೈವಳಿಕೆ ನಗರ ಮೈದಾನ, ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲು ಮೈದಾನ, ಮೀಯಪದವು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ವಿದ್ಯಾವರ್ಧಕ ಶಾಲಾ ಮೈದಾನ, ಮಜೀರ್ಪಳ್ಳ ಸೈಂಟ್ ಜೋಸೆಫ್ ಶಾಲಾ ಮೈದಾನ ಎಂಬಿವುಗಳನ್ನು ಆರಿಸಲಾಗಿದೆ.

ಕಾಸರಗೋಡು ಮಂಡಲದಲ್ಲಿ ತಾಳಿಪಡ್ಪು ಮೈದಾನ, ಚೆರ್ಕಳ ಸೆಂಟ್ರಲ್ ಸ್ಕೂಲ್ ಮೈದಾನ, ಬದಿಯಡ್ಕ ಪಂಚಾ ಯತ್ ಮೈದಾನ (ಬೋಳುಕಟ್ಟೆ), ಶಿರಿಬಾಗಿಲು ಶಾಲಾ ಮೈದಾನ (ಉಳಿಯತ್ತಡ್ಕ), ಬೆಳ್ಳೂರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಮೈದಾನ ಎಂಬಿವುಗಳನ್ನು ಆಯ್ಕೆ ಮಾಡಲಾಗಿದೆ.

ಉದುಮ ಮಂಡಲದಲ್ಲಿ ಕುತ್ತಿಕೋಲ್ ಸರಕಾರಿ ಹೈಸ್ಕೂಲ್ ಶಾಲಾ ಮೈದಾನ, ಕುಂಡಂಗುಯಿ ಸರಕಾರಿ ಶಾಲಾ ಮೈದಾನ (ಬೋವಿಕಾನ), ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಎಂಬಿವು ಗಳನ್ನು ಆಯ್ಕೆ ಮಾಡಲಾಗಿದೆ. ಕಾಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ ಹೊಸದುರ್ಗ ಮಾಂದೋಪ್ ಮೈದಾನ, ಮಾವುಂಗಲ್ ಮಿಲ್ಮಾ ಪ್ಲಾಂಟ್ ಬಳಿಯ ಮೈದಾನ, ಪೊಯ್ಯಕ್ಕಾಡ್ ಜಂಕ್ಷನ್ ಬಳಿಯ ಮೈದಾನ (ಪರಪ್ಪ), ಅಟ್ಟೆಂ ಗಾನ ಮಿನಿ ಸ್ಟೇಡಿಯಂ ಎಂಬಿವುಗಳನ್ನು ಆರಿಸಲಾಗಿದೆ. ತೈಕಡಪ್ಪುರ ವಿಧಾನಸಭಾ ಮಂಡಲಗಳಲ್ಲಿ ಕೂಡಾ ಇದೇ ರೀತಿಯ ೫ ಕ್ಷೇತ್ರಗಳನ್ನು ಆರಿಸಲಾಗಿದೆ. ವಿಧಾನಸಭಾ ಚುನಾವಣೆಯ ಅಂಗವಾಗಿ ರಾಜಕೀಯ ಪಕ್ಷಗಳ ಪ್ರಚಾರ ಸೀಮಿತ ಪ್ರದೇಶಗಳಿಗೆ ನಿಶ್ಚಯಿಸಿರುವುದು, ಸಾರ್ವಜನಿಕರಲ್ಲಿ ನೆಮ್ಮದಿ ಉಂಟು ಮಾಡಲಿದೆ. ಆದರೆ ವಿಧಾನಸಭಾ  ಕ್ಷೇತ್ರದ ಎಲ್ಲಾ ಪ್ರಧಾನ ಕೇಂದ್ರ ಗಳಲ್ಲಿಯೂ ಸಭೆ ನಡೆಸಲು ಅವಕಾಶ ಇಲ್ಲದಿರುವುದೂ ಗೊಂದಲಕ್ಕೆ ಕಾರಣವಾಗಿದೆ. ಮುಳ್ಳೇರಿಯ, ಅಡೂರು ಎಂಬೆಡೆಗಳಲ್ಲಿ ಸಭೆ ನಡೆಸಲು ಅವಕಾಶ ಇಲ್ಲದಿರುವುದು  ವಿಶೇಷವಾಗಿದೆ.

NO COMMENTS

LEAVE A REPLY