ಆಟೋ ಚಾಲಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

0
56

ಹೊಸದುರ್ಗ: ಆಟೋ ಚಾಲಕನೋರ್ವ ಮನೆ ಬಳಿಯ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಕೋಡೋತ್ ಶಾಲೆ ಬಳಿಯ ವಿ. ಸತ್ಯನ್ (೪೧) ಮೃತ ವ್ಯಕ್ತಿ. ಒಡಯಂಚಾಲ್ ಎಂಬಲ್ಲಿರುವ ಆಟೋ ಚಾಲಕನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿನ್ನೆ ರಾತ್ರಿ ೯.೩೦ರ ವೇಳೆ ಸತ್ಯನ್  ಮನೆಗೆ ಮರಳಿದರೂ ಅನಂತರ ಈಗ ಬರುವುದಾಗಿತಿಳಿಸಿ ಹೋದ ಸತ್ಯನ್ ಮರಳಿ ಬಂದಿಲ್ಲ. ಮನೆಯವರು ಹುಡುಕಾಡಿದರೂ ಪತ್ತೆಯಾಗಿಲ್ಲ. ಇಂದು ಬೆಳಿಗ್ಗೆ ಇವರು ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಚಿಂಗಂ-ನಾರಾಯಣಿ ದಂಪತಿಯ ಪುತ್ರನಾದ  ಮೃತರು ಮಕ್ಕಳಾದ ಅದ್ವೈತ್, ಅವನೀತ್, ಅನುರಾಗ್, ಸಹೋದರರಾದ ಸಂಜಯ್, ಸುನಿಲ್ ಮೊದಲಾದವರನ್ನು ಅಗಲಿದ್ದಾರೆ.

NO COMMENTS

LEAVE A REPLY