ಸಚಿವೆ ಸ್ಮೃತಿ ಇರಾನಿ ೩ರಂದು ಬಜಕೂಡ್ಲುವಿಗೆ

0
54

ಮಂಜೇಶ್ವರ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ತಿಂಗಳ ೩ರಂದು ಪೆರ್ಲಕ್ಕೆ ಆಗಮಿಸುವರು. ಮಂಜೇಶ್ವರ ಮಂಡಲ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಚುನಾವಣಾ ಪ್ರಚಾರದ ಅಂಗವಾಗಿ ಅವರು ಆಗಮಿಸಲಿದ್ದು, ಎಣ್ಮಕಜೆ ಪಂಚಾಯ ತ್‌ನ ಬಜಕೂಡ್ಲುವಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಭಾಷಣ ಮಾಡುವರು. ಪಕ್ಷದ ಅಭ್ಯರ್ಥಿ ಕೆ. ಸುರೇಂದ್ರನ್, ಕರ್ನಾ ಟಕ ಸರಕಾರದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ಸಹಿತ ಹಲವು ನೇತಾರರು ಭಾಗವಹಿಸಲಿ ದ್ದಾರೆ. ಸ್ಮೃತಿ ಇರಾನಿಯ ಕಾರ್ಯಕ್ರಮದಂಗವಾಗಿ ವ್ಯಾಪಕ ಸಿದ್ಧತೆಗಳು ಆರಂಭವಾಗಿವೆ.

NO COMMENTS

LEAVE A REPLY