ಪ್ರಧಾನಮಂತ್ರಿ ನಾಳೆ ರಾಜ್ಯಕ್ಕೆ

0
35

ತಿರುವನಂತಪುರ: ಬಿಜೆಪಿ, ಎನ್‌ಡಿಎ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ನಾಳೆ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಕೋನಿ ಹಾಗೂ ತಿರುವನಂತಪುರದಲ್ಲಿ ನಡೆಯುವ ಸಾರ್ವಜನಿಕ ಸಭೆಗಳಲ್ಲಿ ಅವರು ಭಾಗವಹಿಸುವರು.  ನಾಳೆ ಮಧ್ಯಾಹ್ನ ೧.೧೫ಕ್ಕೆ ಕೋನಿ ರಾಜೀವ್‌ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿ ಮೊದಲ ಕಾರ್ಯಕ್ರಮ ನಡೆಯಲಿದೆ. ಅಲ್ಲಿಂದ ಪ್ರಧಾನಿ ೨.೦೫ಕ್ಕೆ ಕನ್ಯಾಕುಮಾರಿಗೆ ತೆರಳುವರು. ಸಂಜೆ ೫ಕ್ಕೆ ಕಾರ್ಯವಟ್ಟಂ ಗ್ರೀನ್ ಫೀಲ್ಡ್ ಸ್ಟೇಡಿಯಂನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಅವರು ಭಾಗವಹಿಸುವರು.  ಪಾಲಕ್ಕಾಡ್ ಜಿಲ್ಲೆಯ ಎನ್‌ಡಿಎ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಮೊನ್ನೆ ಆಗಮಿಸಿ ಮರಳಿದರು.

NO COMMENTS

LEAVE A REPLY