ಉಪ್ಪಳ: ಅಸೌಖ್ಯದಿಂದ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದ ಇಲೆಕ್ಟ್ರೀಶಿಯನ್ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಉಪ್ಪಳ ಕೋಡಿಬೈಲು ನಿಡುಮದಿ ಪ್ರಸಾದ್ ನಿಲಯದ ಗುರುಪ್ರಸಾದ್ (೩೦) ಮೃತಪಟ್ಟ ಯುವಕ. ನಿನ್ನೆ ಸಂಜೆ ೪ ಗಂಟೆ ವೇಳೆ ಈ ಘಟನೆ ನಡೆದಿದೆ.
ಇವರು ಕೈಕಂಬದಲ್ಲಿ ಆಟೋ ಇಲೆಕ್ಟ್ರೀಶಿಯನ್ ಅಂಗಡಿಯಲ್ಲಿ ನೌಕರನಾಗಿ ದ್ದಾರೆ. ನಿನ್ನೆ ಬೆಳಿಗ್ಗೆ ಇವರು ಕೆಲಸಕ್ಕೆ ತೆರಳಿದ್ದು, ಕೆಲಸದ ಮಧ್ಯೆ ಇವರಿಗೆ ಅಸೌಖ್ಯವುಂಟಾಗಿತ್ತು. ಅನಂತರ ಇವರು ವಿಶ್ರಾಂತಿಗೆಂದು ಮನೆಗೆ ಬಂದಿದ್ದರೆನ್ನಲಾಗಿದೆ. ಮನೆಯಲ್ಲಿ ಊಟಮಾಡಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಅಸೌಖ್ಯ ಉಲ್ಭಣಿಸಿ ಕೂಡಲೇ ಉಪ್ಪಳ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಜೀವ ರಕ್ಷಿಸಲಾಗಲಿಲ್ಲ. ಹೃದಯಾಘಾತದಿಂದ ಸಾವು ಸಂಭವಿಸಿದೆಯೆಂದು ತಿಳಿದುಬಂದಿದೆ. ಉಪ್ಪಳದಲ್ಲಿ ಹೋಟೆಲ್ ನಡೆಸುತ್ತಿರುವ ಗೋಪಾಲಕೃಷ್ಣ-ಉಮಾವತಿ ದಂಪತಿಯ ಪುತ್ರನಾದ ಗುರುಪ್ರಸಾದ್ ಅವಿವಾಹಿತನಾಗಿದ್ದು, ಸಹೋದರ ಹರಿಪ್ರಸಾದ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ