ವಿಧಾನಸಭಾ ಚುನಾವಣೆ: ಬಹಿರಂಗ ಪ್ರಚಾರ ನಾಲ್ಕರಂದು ಕೊನೆ

0
41

ತಿರುವನಂತಪುರ: ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರ ಎಪ್ರಿಲ್ ೪ರಂದು ಸಂಜೆ ೭ ಗಂಟೆಗೆ ಕೊನೆಗೊಳಿಸಬೇಕೆಂದು ಚುನಾವಣೆ ಆಯೋಗ ತಿಳಿಸಿದೆ. ಇದೇ ವೇಳೆ ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಸಂಜೆ ೬ ಗಂಟೆಯೊಳಗೆ ಪ್ರಚಾರ ಕೊನೆಗೊಳಿಸ ಬೇಕಾಗಿದೆ. ಬಹಿರಂಗ ಪ್ರಚಾರ ಕೊನೆಗೊಂಡ ಬಳಿಕ ಸಾರ್ವಜನಿಕ ಸಭೆ, ಮೆರವಣಿಗೆ, ರಾಜಕೀಯ ಬೆಂಬಲದ ಕಲಾ ಕಾರ್ಯ ಕ್ರಮಗಳು, ಟೆಲಿವಿಷನ್ ಸಹಿತ  ಆಧುನಿಕ ಮಾಧ್ಯಮಗಳಲ್ಲೂ ಪ್ರಚಾರ ನಡೆಸಬಾರದು. ಇದನ್ನು ಉಲ್ಲಂಘಿಸು ವವರಿಗೆ ಎರಡು ವರ್ಷ ಸಜೆ, ದಂಡ ಲಭಿಸುವ ಸಾಧ್ಯದೆಯಿದೆ. ಈ ಸಂದರ್ಭದಲ್ಲಿ ಮುದ್ರಣ ಮಾಧ್ಯಮ ಗಳಲ್ಲೂ ಜಾಹೀರಾತು ನೀಡುವುದಕ್ಕೂ ಚುನಾವಣೆ ಆಯೋಗದ ಮೀಡಿಯ ಸರ್ಟಿಫಿಕೇ ಶನ್ ಆಂಡ್ ಮೋನಿಟರಿಂಗ್ ಸಮಿತಿಯ ಒಪ್ಪಿಗೆ ಮುಂದಾಗಿ ಪಡೆಯಬೇಕೆಂದೂ ಪ್ರಧಾನ ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.

NO COMMENTS

LEAVE A REPLY