ಪಶ್ಚಿಮ ಬಂಗಾಲ: ಎರಡನೇ ಹಂತದ ಚುನಾವಣೆಯಲ್ಲೂ ವ್ಯಾಪಕ ಹಿಂಸಾಚಾರ

0
47

ನವದೆಹಲಿ: ವಿಧಾನಸಭಾ ಚುನಾ ವಣೆಯ ಎರಡನೇ ಹಂತದ ಮತದಾನದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ. ಪಶ್ಚಿಮಬಂಗಾಳದ ಪಶ್ಚಿಮ ಮಿಡ್ನಾಪುರದಲ್ಲಿ ಓರ್ವ ತೃಣಮೂಲ ಕಾಂಗ್ರೆಸ್  ಕಾರ್ಯಕರ್ತನ ಕೊಲೆ ನಡೆದಿದೆ. ನಂದೀಗ್ರಾಮದಲ್ಲಿ ಓರ್ವ ಬಿಜೆಪಿ ಕಾರ್ಯಕರ್ತನ ಮೃತದೇಹ ಲಭಿಸಿದೆ. ಇದು ಆತ್ಮಹತ್ಯೆಯೆಂದು ಪೊಲೀಸರು ಹೇಳಿದರೆ, ಕೊಲೆ ಮಾಡಿ ನೇಣು ಬಿಗಿದು  ತೂಗಿ ಹಾಕಲಾಗಿ ದೆಯೆಂದು ಬಿಜೆಪಿ ಹೇಳಿದೆ.

ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ  ಇಂದು ಪಶ್ಚಿಮಬಂಗಾಲದಲ್ಲೂ, ಅಸ್ಸಾಂನಲ್ಲೂ  ನಡೆಯುತ್ತಿದೆ. ಪಶ್ಚಿಮ ಬಂಗಾಲದ ೩೦ ಕ್ಷೇತ್ರಗಳಲ್ಲಿ, ಅಸ್ಸಾಂನ ೩೯ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿ ನೇತಾರ ಸುಮೇಂದು ಅಧಿಕಾರಿ  ಎಂಬವರು ಸ್ಪರ್ಧಿಸುವ ನಂದಿಗ್ರಾಂ ವಿಧಾನಸಭಾ ಕ್ಷೇತ್ರದ ಚುನಾವಣೆ ಇಂದು ನಡೆಯುತ್ತಿದೆ. ವಿಧಾನಸಭಾ ಚುನಾವಣೆಯ ಪ್ರಥಮ ಹಂತದ ದಲ್ಲಿಯೂ ಪಶ್ಚಿಮ ಬಂಗಾಲದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಓರ್ವ ಪೊಲೀಸ್ ಅಧಿಕಾರಿ, ಓರ್ವ ಬಿಜೆಪಿ ಕಾರ್ಯಕರ್ತ ಹಿಂಸಾಚಾರದಲ್ಲಿ ಕೊಲೆ ಗೈಯ್ಯಲ್ಪಟ್ಟಿದ್ದರು. ಪಶ್ಚಿಮ ಬಂಗಾಲದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ.  ಪಶ್ಚಿಮ ಬಂಗಾಲದಲ್ಲಿ ಚುನಾವಣೆಗಾಗಿ ೨೦ ತುಕಡಿ ಕೇಂದ್ರ ಅರೆ ಸೈನಿಕ ಪಡೆಯನ್ನು ನಿಯೋಜಿಸಲಾಗಿದೆ. ಅಧಿಕಾರ ಉಳಿಸಲು ತೃಣಮೂಲ ಕಾಂಗ್ರೆಸ್, ಕಸಿಯಲು ಬಿಜೆಪಿ ಶತಪ್ರಯತ್ನ ನಡೆಸುತ್ತಿವೆ.

NO COMMENTS

LEAVE A REPLY