ಹೆಚ್ಚುತ್ತಿರುವ ಕೋವಿಡ್: ರಾಜ್ಯದಲ್ಲಿ ಇಂದಿನಿಂದ ಕಠಿಣ ನಿಯಂತ್ರಣ

0
63

ಕಾಸರಗೋಡು: ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ಇನ್ನಷ್ಟು ಕಠಿಣ ನಿಯಂತ್ರಣಗಳನ್ನು ಹೇರಲಾಗಿದೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ,  ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸುತ್ತಿರು ವುದಾಗಿ ಖಚಿತಪಡಿಸಬೇಕೆಂದು ಆದೇಶ ಹೊರಡಿಸಲಾಗಿದೆ. ನಿಯಂತ್ರಣಗಳನ್ನು ಉಲ್ಲಂಘಿಸು ವವರ ವಿರುದ್ಧ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.  ಅಲ್ಲದೆ ಇನ್ನಷ್ಟು ಸೆಕ್ಟರಲ್ ಮೆಜಿಸ್ಟ್ರೇಟರ್‌ಗಳನ್ನು ನೇಮಿಸಲು ತೀರ್ಮಾನಿಸಲಾಗಿದೆ.

ಅನ್ಯರಾಜ್ಯಗಳಿಂದ ಆಗಮಿಸು ವವರು ಒಂದು ವಾರ ನಿಗಾ ದಲ್ಲಿರಬೇಕಾಗಿದೆ. ರೋಗ ಬಾಧಿತ ರನ್ನು ಶೀಘ್ರ ಪತ್ತೆಹಚ್ಚಲು ಆಂಟಿಜೆನ್ ತಪಾಸಣೆ ತೀವ್ರಗೊಳಿಸ ಲಾಗುವುದು.  ಇದರ ಜತೆಗೆ ಪಿಸಿಆರ್ ತಪಾಸಣೆ ನಡೆಸಲಾಗು ವುದು. ರಾಜ್ಯದಲ್ಲಿ ನಿನ್ನೆ ೩೫೦೨ ಮಂದಿಗೆ ಕೋವಿಡ್ ದೃಢೀಕರಿ ಸಲಾಗಿದೆ.  ಕೆಲವು ದಿನಗಳಿಂದ ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವುಂಟಾಗಿ ರುವುದರಿಂದ ಇನ್ನಷ್ಟು ಕಠಿಣ ನಿಯಂತ್ರಣಗಳನ್ನು ಹೇರಲು ನಿರ್ಧರಿಸಲಾಗಿದೆ. ಇದೇ ವೇಳೆ ಅತೀ ಹೆಚ್ಚು ಮಂದಿಗೆ ಕೋವಿಡ್ ವ್ಯಾಕ್ಸಿನ್ ನೀಡಲಿರುವ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಮೆಡಿಕಲ್ ಆಫೀಸರ್ ಹಾಗೂ ಜಿಲ್ಲಾಧಿಕಾರಿ ಗಳಿಗೆ ನಿರ್ದೇಶ ನೀಡಲಾಗಿದೆ. ಚುನಾವಣಾ  ಕರ್ತವ್ಯದಲ್ಲಿದ್ದ ಎಲ್ಲಾ ಪೋಲಿಂಗ್ ಏಜೆಂಟ್‌ಗಳಿಗೂ ಕೋವಿಡ್ ತಪಾಸಣೆ ನಡೆಸಲಾಗು ವುದು.  

ಇದೇ ವೇಳೆ ದೇಶದಲ್ಲಿ ಕೋವಿಡ್‌ನ ಈಗಿನ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಲು ಪ್ರಧಾನಮಂತ್ರಿ ನರೇಂದ್ರಮೋದಿ ಇಂದು ಸಂಜೆ ೬.೩೦ಕ್ಕೆ  ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸುವರು. ವ್ಯಾಕ್ಸಿನ್ ವಿತರಣೆ ಕುರಿತು ಚರ್ಚೆ ನಡೆಯಲಿದೆ. 

NO COMMENTS

LEAVE A REPLY