ರೇಶನ್ ವ್ಯಾಪಾರಿ ಈಶ್ವರ ಪೂಜಾರಿ ನಿಧನ

0
83

ಉಪ್ಪಳ: ರೇಶನ್ ವ್ಯಾಪಾರಿ, ಧಾರ್ಮಿಕ ಮುಂದಾಳು ಬೇಕೂರು ಬೊಳ್ಳಾರು ನಿವಾಸಿ ಈಶ್ವರ ಪೂಜಾರಿ (೭೨) ನಿನ್ನೆ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದರು. ಒಂದು ವರ್ಷದಿಂದ ಅಸೌಖ್ಯ ದಿಂದ ಬಳಲುತ್ತಿದ್ದರು. ಒಂದು ವಾರದಿಂದ ಅಸೌಖ್ಯ ಉಲ್ಬಣ ಗೊಂಡು ಮನೆಯಲ್ಲಿ ಚಿಕಿತ್ಸೆ ಯಲ್ಲಿದ್ದರು. ಹಲವಾರು ವರ್ಷಗಳಿಂದ ಬೇಕೂರುನಲ್ಲಿ ರೇಶನ್ ಅಂಗಡಿ ನಡೆಸುತ್ತಿದ್ದರು. ಸಮಾಜ ಸೇವಕರೂ, ಕೊಡುಗೈ ದಾನಿಯಾಗಿದ್ದರು. ಹಿರಣ್ಯ ಯುವಕ ವೃಂದ ಹಿರಣ್ಯ ನಗರ ಇದರ ಗೌರವಾಧ್ಯಕ್ಷ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಹಿರಣ್ಯ ನಗರ ಬೇ ಕೂರು ಇದರ ಅಧ್ಯಕ್ಷರಾಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಸುಭಾಸ್ ನಗರ ಇದರ ಮಾಜಿ ಅಧ್ಯಕ್ಷರಾಗಿದ್ದಾರೆ. ಮೃತರು ಪತ್ನಿ ಲಲಿತ, ಪುತ್ರಿ ವಿದ್ಯಾ, ಅಳಿಯ ಗಿರೀಶ್, ಸಹೋದರ, ಸಹೋದರಿ ಯರಾದ ಬಾಬು, ನಾರಾಯಣ, ವಿಶ್ವನಾಥ, ರುಕ್ಮಿಣಿ, ಹೇಮಲತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

NO COMMENTS

LEAVE A REPLY