ಬಾಲುಶ್ಶೇರಿಯಲ್ಲಿ ಘರ್ಷಣೆ: ಕಾಂಗ್ರೆಸ್ ಕಚೇರಿಗೆ ಬೆಂಕಿ

0
85

ಕಲ್ಲಿಕೋಟೆ: ಬಾಲುಶ್ಶೇರಿ ಉಣ್ಣಿಕುಳಂನಲ್ಲಿ ಕಾಂಗ್ರೆಸ್ ಕಚೇರಿಗೆ ಕಿಚ್ಚಿರಿಸಲಾಗಿದೆ. ಸ್ಥಳದಲ್ಲಿ  ಕಳೆದ ರಾತ್ರಿ ಸಿಪಿಎಂ- ಕಾಂಗ್ರೆಸ್ ಮಧ್ಯೆ ಘರ್ಷಣೆ ಉಂಟಾಗಿತ್ತು. ಇದರ ಬೆನ್ನಲ್ಲೇ ಇಂದು ಮುಂಜಾನೆ ಎರಡೂವರೆ ಗಂಟೆ ವೇಳೆ ಕಾಂಗ್ರೆಸ್  ಕಚೇರಿಗೆ ಕಿಚ್ಚಿರಿಸಲಾಗಿದೆ. ಜೊತೆಗೆ ಕಚೇರಿಯನ್ನು ಧ್ವಂಸಗೊಳಿಸಲು ಯತ್ನಿಸಲಾಗಿದೆ. ಘರ್ಷಣೆಯ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಲತೀಫ್ ಎಂಬವರ ಮನೆಗೆ ಕಲ್ಲೆಸೆದು ಅಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಹಾನಿಗೊಳಿಸಿದ್ದರು.

ಪಾನೂರು ಕೊಲೆಯ ಮುಂದುವರಿಕೆಯಾಗಿ ಬಾಲುಶ್ಶೇರಿ ಕರುಮಲ ಎಂಬಲ್ಲಿ ನಿನ್ನೆ ಸಿಪಿಎಂ- ಕಾಂಗ್ರೆಸ್ ಘರ್ಷಣೆ ಉಂಟಾಗಿತ್ತು. ಐಕ್ಯರಂಗದ ಪ್ರತಿಭಟನೆ ಮಧ್ಯೆಯಾಗಿತ್ತು ಘರ್ಷಣೆ ತಲೆಯೆತ್ತಿರುವುದು. ಇದರಲ್ಲಿ ಹಲವಾರು ಕಾರ್ಯಕರ್ತರು ಗಾಯ ಗೊಂಡಿದ್ದರು. ಇದರ ಮುಂದುವರಿಕೆ ಯಾಗಿ ಬೆಂಕಿ ಹಚ್ಚಲಾಗಿದೆಯೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಬಿಗು ಕಾವಲು ಏರ್ಪಡಿಸಿದ್ದಾರೆ.

NO COMMENTS

LEAVE A REPLY