ದೈನಂದಿನ ಇಂಧನ ಬೆಲೆ ಏರಿಕೆ ವಿರುದ್ಧ ಕಲ್ಲಿಕೋಟೆ ನಿವಾಸಿಯ ನೇಪಾಳ ಸೈಕಲ್ ಯಾತ್ರೆ

0
65

ಕಾಸರಗೋಡು: ಪೆಟ್ರೋಲ್-ಡೀಸೆಲ್ ಬೆಲೆ ಪ್ರತಿದಿನ ಏರಿಕೆ ಪ್ರತಿಭಟಿಸಿ ಕಲ್ಲಿಕೋಟೆ ನಿವಾಸಿ ಆರಂ ಭಿಸಿದ ನೇಪಾಳದವರೆಗಿನ ಸೈಕಲ್ ಯಾತ್ರೆ ಕಾಸರಗೋ ಡಿಗೆ ತಲುಪಿದೆ. ಕಲ್ಲಿಕೋಟೆ ಮಾಳಕಡವ್ ನಿವಾಸಿ ಅಖಿಲೇಶ್ ಕುಮಾರ್ (೨೭) ಇಂದು ಬೆಳಿಗ್ಗೆ ಕಾಸರಗೋಡಿಗೆ ಆಗಮಿಸಿದ್ದು, ಅನಂತರ ಯಾತ್ರೆ ಮುಂದುವರಿಸಿದ್ದಾರೆ.  ತಲಶ್ಶೇರಿ ಅಮೃತ ಶಿಕ್ಷಣ ಕೇಂದ್ರದಲ್ಲಿ ಕ್ರೀಡಾ ಅಧ್ಯಾಪಕನಾಗಿರುವ ಅಖಿಲೇಶ್ ಕುಮಾರ್ ಚುನಾವಣಾ ದಿನದಂದು ಬೆಳಿಗ್ಗೆ ಮತದಾನ ಮಾಡಿದ ನಂತರ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಕೋಟ್ಟಯಂ ನಿವಾಸಿಗಳಾದ ಇಬ್ಬರು ಗೆಳೆಯರು ಜತೆಗೆ ಬರುವುದಾಗಿ ಹೇಳಿದ್ದರೂ ಕೊನೆಯ ಕ್ಷಣದಲ್ಲಿ ಹಿಂಜರಿದರು. ಈ ಹಿನ್ನೆಲೆಯಲ್ಲಿ ಅಖಿಲೇಶ್ ಒಂಟಿಯಾಗಿ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ೫೬ ದಿನಗಳ ಕಾಲ ೪೨೦೦ ಕಿಲೋ ಮೀಟರ್ ಸೈಕಲ್ ಯಾತ್ರೆ ನಡೆಸಿ, ಪೆಟ್ರೋಲ್, ಡೀಸೆಲ್‌ನಲ್ಲಿ ಪ್ರತಿದಿನ ಬೆಲೆಯೇರಿಕೆಯ ವಿರುದ್ಧ ಜನ ಜಾಗೃತಿ ಮೂಡಿಸುವುದು ಅಖಿಲೇಶ್‌ರ ಗುರಿಯಾಗಿದೆ.

NO COMMENTS

LEAVE A REPLY