ವ್ಯಾಪಕಗೊಳ್ಳುತ್ತಿರುವ ಕೋವಿಡ್ ರಾಜ್ಯದಲ್ಲಿ ಕಟ್ಟೆಚ್ಚರಕ್ಕೆ ಆದೇಶ

0
141

ತಿರುವನಂತಪುರ: ಕೋವಿಡ್ ರೋಗಿಗಳ ಸಂಖ್ಯೆ ರಾಜ್ಯದಲ್ಲಿ ಮತ್ತೆ ಅಧಿಕವಾಗುತ್ತಿದ್ದು, ಬಿಗು ನಿಯಂತ್ರಣಗಳ ಚಿಂತನೆ ನಡೆದಿದೆ. ಮಾಸ್ಕ್ ಧರಿಸದವರ ವಿರುದ್ಧ, ಮಾಸ್ಕ್ ಸರಿಯಾಗಿ ಧರಿಸದವರ ವಿರುದ್ಧ, ಸಾಮಾಜಿಕ ಅಂತರ ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಈಗಾಗಲೇ ಸರಕಾರ ಆದೇಶ ನೀಡಿದೆ.  ಇದೇ ವೇಳೆ ಅಗತ್ಯವಿದ್ದರೆ ರಾತ್ರಿ ಕಾಲಗಳಲ್ಲಿ ಕಟ್ಟೆಚ್ಚರ ಏರ್ಪಡಿಸಲು ಹಾಗೂ ಕಂಟೋನ್ಮೆಂಟ್ ವಲಯ ರೂಪಿಸಲು ಕೇಂದ್ರ ಸರಕಾರ ಆದೇಶ ನೀಡಿದೆ.

ಕಳೆದ ೨೪ ಗಂಟೆಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ೧೩೧೯೬೮ ಕೋವಿಡ್ ರೋಗಿಗಳು ಹಾಗೂ ೭೮೦ ಸಾವು ವರದಿಯಾಗಿದೆ.  ಇದು ಆತಂಕ ಮೂಡಿಸುವ ಬೆಳವಣಿಗೆಯಾಗಿದೆಯೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.  ಇತರ ರಾಜ್ಯಗಳಿಂದ ಕೇರಳಕ್ಕೆ ಬರುವವರು ೭ ದಿನಗಳಿಗಿಂತ ಹೆಚ್ಚು ಕಾಲ ನೆಲೆಸುವವರಾಗಿದ್ದರೆ ಮೊದಲ ೭ ದಿನ ಕ್ವಾರಂಟೈನ್ ನಲ್ಲಿರಬೇಕಾಗಿದೆ. ಅಲ್ಲದೆ ೮ನೇ ದಿನ ಕೋವಿಡ್ ಪರೀಕ್ಷೆ ನಡೆಸಬೇಕು. ವಿದೇಶದಿಂದ ಆಗಮಿಸುವವರ ಬಗ್ಗೆ ಈ ಹಿಂದೆ ಹೊರಡಿಸಿದ ಆದೇಶದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ರಾಜ್ಯ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆ.   ಎಪ್ರಿಲ್ ೧೦ರಿಂದ ೧೪ರ ವರೆಗೆ ವ್ಯಾಕ್ಸಿನ್ ಉತ್ಸವ ಆಚರಿಸಬೇಕು. ಅರ್ಹರಾದ ಬಹುತೇಕ ಮಂದಿಗೆ ವ್ಯಾಕ್ಸಿನ್ ನೀಡಬೇಕು ಎಂದು  ವಿವಿಧ ಸರಕಾರಿ ಮೂಲಗಳು ತಿಳಿಸಿವೆ.

  ಕೋವಿಡ್ ನಿಯಂತ್ರಣ ಉಲ್ಲಂಘಿಸಿದ ಪ್ರಕರಣದಲ್ಲಿ ರಾಜ್ಯದಲ್ಲಿ ನಿನ್ನೆ ೨೩೬ ಪ್ರಕರಣಗಳು ದಾಖಲಾಗಿದೆ.

ಕೋವಿಡ್ ದೃಢೀಕರಣಗೊಂಡ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜ ಯನ್‌ರನ್ನು ಕಲ್ಲಿಕೋಟೆ ಆಸ್ಪತ್ರೆಯಲ್ಲಿ ದಾಖಲಿ ಸಲಾಗಿದೆ. ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೂ ಕೋವಿಡ್ ದೃಢೀಕರಿಸಲಾಗಿದೆ.

NO COMMENTS

LEAVE A REPLY