ಶಾಕ್ ತಗಲಿ ಇಲೆಕ್ಟ್ರೀಷ್ಯನ್ ಮೃತ್ಯು

0
170

ಉಪ್ಪಳ: ಇಲೆಕ್ಟ್ರೀಷ್ಯನ್ ಶಾಕ್ ತಗಲಿ ಮೃತಪಟ್ಟ ಘಟನೆ ನಡೆದಿದೆ.  ಜೋಡುಕಲ್ಲು ಮಡಂದೂರು ನಿವಾಸಿ ಚಂದ್ರಶೇಖರ (೫೫) ನಿನ್ನೆ ಮೃತಪಟ್ಟಿದ್ದಾರೆ. ದೇರಂಬಳ ಮಿತ್ತಾಳ ಎಂಬಲ್ಲಿ  ಪಂಪ್  ದುರಸ್ತಿ ನಡೆಸುತ್ತಿದ್ದ ವೇಳೆ ಶಾಕ್  ತಗಲಿರಬೇಕೆಂದು ಶಂಕಿಸಲಾಗಿದೆ. ಶಾಕ್ ತಗಲಿದ ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ.  ಮಂಜೇಶ್ವರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಇವರ ತಂದೆ ಕೊರಗಪ್ಪ ರೈ ಈ ಹಿಂದೆ ನಿಧನಹೊಂದಿದ್ದಾರೆ. 

ಮೃತರು ತಾಯಿ ಸುಶೀಲಾ, ಪತ್ನಿ ದೇವಕಿ, ಮಕ್ಕಳಾದ ಜಯರಾಜ್, ನಿತೇಶ್, ಸಹೋದರ ರಘುನಾಥ ರೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಸಹೋದರ ರಾಧಾಕೃಷ್ಣ ರೈ ಈ ಹಿಂದೆ ನಿಧನಹೊಂದಿದ್ದಾರೆ.

NO COMMENTS

LEAVE A REPLY