ಮಾಜಿ ಸ್ಪೀಕರ್ ಟಿ.ಎಸ್. ಜೋನ್ ನಿಧನ

0
238

ತಿರುವನಂತಪುರ: ವಿಧಾನಸಭಾ ಮಾಜಿ ಸ್ಪೀಕರ್, ಮಾಜಿ ಸಚಿವ ಟಿ. ಎಸ್. ಜೋನ್(೭೪) ಇಂದು ಬೆಳಿಗ್ಗೆ ೮ ಗಂಟೆಗೆ ನಿಧನರಾದರು. ೧೯೩೯ರಲ್ಲಿ ಜನಿಸಿದ ಇವರು ನಾಲ್ಕು ಬಾರಿ ಕಲ್ಲುಪಾರ ಮಂಡಲದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ೧೯೭೯ರಲ್ಲಿ ಎ. ಕೆ. ಆಂಟನಿಯವರ ಸಚಿವ ಸಂಪುಟದಲ್ಲಿ ಹಾಗೂ ಆ ಬಳಿಕದ ಪಿ. ಕೆ. ವಾಸು ದೇವನ್‌ರ ಮುಖ್ಯಮಂತ್ರಿಯಾಗಿದ್ದ ಟಿ.ಎಸ್. ಜೋನ್ ನಾಗರಿಕ ಆಹಾರ ಪೂರೈಕೆ ಇಲಾಖೆಯ ಸಚಿವರಾಗಿದ್ದರು. ಕೇರಳ ಕಾಂಗ್ರೆಸ್ ಸ್ಥಾಪಕ ನೇತಾರರಲ್ಲಿ ಓರ್ವರಾಗಿದ್ದರು.  ಪ್ರಸ್ತುತ ಕೇರಳ ಕಾಂಗ್ರೆಸ್ ಸೆಕ್ಯೂಲರ್ ವರ್ಕಿಂಗ್ ಚಯರ್ ಮೇನ್ ಆಗಿ ಕಾರ್ಯಾಚ ರಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅಸೌಖ್ಯ ನಿಮಿತ್ತ ಚೇರ್ತಲ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.

NO COMMENTS

LEAVE A REPLY