ಜ್ವರ: ಚಿಕಿತ್ಸೆಯಲ್ಲಿದ್ದ ಮೆಕ್ಯಾನಿಕ್ ನಿಧನ

0
87

ಉಪ್ಪಳ: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಇಂದು ಮುಂಜಾನೆ ನಿಧನ ಹೊಂದಿದರು. ಐಲ ಕ್ಷೇತ್ರ ಪರಿಸರ ನಿವಾಸಿ ಹಾಗೂ ಉಪ್ಪಳದಲ್ಲಿ ವಾಹನದ ಇಲೆಕ್ಟ್ರಿಕ್ ಮೆಕ್ಯಾನಿಕ್ ಆಗಿದ್ದ ಪವನ್‌ರಾಜ್ (೨೩) ನಿಧನ ಹೊಂದಿದ ಯುವಕ. ಇವರಿಗೆ ಕಳೆದ ೫ ದಿನದ ಹಿಂದೆ ಜ್ವರ ತಗಲಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ್ವರ ಉಲ್ಬಣಗೊಂಡು ಇಂದು ಮುಂಜಾನೆ ೪ ಗಂಟೆಗೆ ಸಾವು ಸಂಭವಿಸಿದೆ.

ಮೃತ ಪವನ್‌ರಾಜ್ ತಂದೆ ಅನಂತಪದ್ಮನಾಭ, ತಾಯಿ ರಾಜೀವಿ, ಸಹೋದರ ಧನ್‌ರಾಜ್,  ಸಹೋದರಿ ಧನ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY