ಮೀಂಜ: ಕೊಳಚಪ್ಪುನಲ್ಲಿ  ಹುಲಿ ಪ್ರತ್ಯಕ್ಷ ವದಂತಿ

0
19

ಮೀಂಜ: ಇಲ್ಲಿನ ಬೇರಿಕೆ ಸಮೀಪ ಹುಲಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅರಣ್ಯಾಧಿಕಾರಿಗಳು ತಲುಪಿ ಶೋಧ ನಡೆಸುವರೆಂದು ತಿಳಿದು ಬಂದಿದೆ. ಬೇರಿಕೆ ಬಳಿಯ ಕೊಳ ಚಪ್ಪು ಎಂಬಲ್ಲಿ ಹುಲಿ ಕಾಣಿಸಿ ಕೊಂಡಿರುವುದಾಗಿ ಹೇಳಲಾಗುತ್ತಿದೆ. ಕೊಳಚಪ್ಪು ನಿವಾಸಿ ವೆಂಕಪ್ಪ ಪೂಜಾರಿ ಎಂಬವರು ಇಂದು ಬೆಳಿಗ್ಗೆ  ೬.೩೦ರ ವೇಳೆ ಮನೆಯ ಹೊರಗಡೆ ನಿಂತಿದ್ದಾಗ ಮನೆ ಮುಂಭಾಗ ಗುಡ್ಡದಲ್ಲಿ ಹುಲಿ ಹೋಗುತ್ತಿರುವುದು ಕಂಡು ಬಂದಿದೆ ಎನ್ನಲಾಗಿದೆ. ಕೂಡಲೇ ಅವರು ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪೊಲೀಸರು ತಲುಪಿ ಶೋಧ ನಡೆಸಿದ್ದಾರೆ. ಆದರೆ ಹುಲಿಯನ್ನು ಕಾಣಲಾಗಲಿಲ್ಲ. ಈ ಬಗ್ಗೆ ಅರಣ್ಯಾ ಧಿಕಾರಿಗಳಿಗೂ ವಿಷಯ ತಿಳಿಸಲಾ ಗಿದೆ. ಅಧಿಕಾರಿಗಳು ಶೀಘ್ರ ತಲುಪು ವುದಾಗಿ ತಿಳಿಸಿದ್ದಾರೆನ್ನಲಾಗಿದೆ.

ಕೊಳಚಪ್ಪು ಸಮೀಪ ಗುಡ್ಡಗಾಡು ಪ್ರದೇಶವಿದ್ದು, ಹುಲಿ ಆ ಭಾಗಕ್ಕೆ ತೆರಳಿರಬಹುದೆಂದು ಅಂದಾಜಿಸಲಾಗಿದೆ.

NO COMMENTS

LEAVE A REPLY