ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದು ಯುವಕ ಮೃತ್ಯು

0
39

ಹೊಸದುರ್ಗ: ಮೊಬೈಲ್‌ನಲ್ಲಿ ಕರೆ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಕರ್ನಾಟಕ ನಿವಾಸಿ ಮೃತಪಟ್ಟ ಘಟನೆ ನಡೆದಿದೆ. ಸಿರಾಳಕೊಪ್ಪ ನಿವಾಸಿ ಶ್ರೀಕಾಂತ್ (೪೦) ಮೃತಪಟ್ಟ ವ್ಯಕ್ತಿ. ನೀಲೇಶ್ವರ ವಟ್ಟಕಲ್‌ನಲ್ಲಿ ಕೆಂಪುಕಲ್ಲು ಕೋರೆಯಲ್ಲಿ ಕೆಲಸಕ್ಕೆಂದು ನಿನ್ನೆ ಇವರು ಬಂದಿದ್ದರು. ಇಂದು ಕೆಲಸಕ್ಕೆ ಹಾಜರಾಗಬೇಕಿದೆ. ನಿನ್ನೆ ಸಂಜೆ ಮನೆಯವರ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಇವರ ಜತೆಗಿದ್ದ ಇತರ ಕೆಲಸಗಾರರಿಗೂ ಸಿಡಿಲಿನ ಆಘಾತದಲ್ಲಿ ಗಾಯ ಗಳಾಗಿವೆ. ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತದೇ ಹವನ್ನು ಇಂದು ಊರಿಗೆ ಕೊಂಡೊಯ್ಯಲಾಗುವುದು.

NO COMMENTS

LEAVE A REPLY