ಕಾಂಗ್ರೆಸ್ ರಾಜ್ಯ ನಾಯಕತ್ವದಲ್ಲಿ ಬದಲಾವಣೆ ಸಾಧ್ಯತೆ

0
18

ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ಉಂಟಾದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ  ಸ್ಥಾನಕ್ಕೆ ಮುಲ್ಲಪ್ಪಳ್ಳಿ ರಾಮಚಂದ್ರನ್ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಸೂಚನೆಯಿದೆ. ಎಐಸಿಸಿ  ನಾಯಕತ್ವದೊಂದಿಗೆ ಈ ಬಗ್ಗೆ ಸಮಾಲೋಚಿಸಿರುವುದಾಗಿ ಹೇಳಲಾಗುತ್ತಿದೆ. ಮುಲ್ಲಪಳ್ಳಿಯವರ ಅಂತಿಮ ನಿರ್ಧಾರ ತಿಳಿದಬಳಿಕ  ಮುಂದಿನ ಕ್ರಮ ಕೈಗೊಳ್ಳಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಕಾಂಗ್ರೆಸ್ ರಾಜ್ಯ ಸಮಿತಿ ನಾಯಕತ್ವ ಬದಲಾವಣೆಗಾಗಿ ಎ ಬಣದಿಂದ ಒತ್ತಡ ತೀವ್ರಗೊಂಡಿದೆ.  ಈ ಹಿನ್ನೆಲೆಯಲ್ಲಿ ಮುಲ್ಲಪ್ಪಳ್ಳಿ ರಾಜೀನಾಮೆಗೆ ಮುಂದಾಗಿರುವುದಾಗಿ ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ವಿಪಕ್ಷ ನೇತಾರನ ಸ್ಥಾನದಿಂದ ರಮೇಶ್ ಚೆನ್ನಿತ್ತಲರನ್ನು ಬದಲಾಯಿಸಬೇಕಾದ ಅಗತ್ಯವಿಲ್ಲವೆಂದೂ ಕಾಂಗ್ರೆಸ್ ಎ ಬಣ ಅಭಿಪ್ರಾಯಪಟ್ಟಿದೆ.

NO COMMENTS

LEAVE A REPLY