ಉಪ್ಪಳದಲ್ಲಿ ಬೈಕ್-ಕಾರು ಢಿಕ್ಕಿ ಹೊಡೆದು ಆಟೋ ಚಾಲಕ ಮೃತ್ಯು: ಓರ್ವನಿಗೆ ಗಂಭೀರ

0
47

ಉಪ್ಪಳ: ಇಲ್ಲಿನ ಪೊಸೋಟ್ ನಲ್ಲಿ  ಬೈಕ್ ಹಾಗೂ ಕಾರು ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬೈಕ್ ಚಲಾಯಿಸುತ್ತಿದ್ದ ಆಟೋ ಚಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮುಸೋಡಿ ನಿವಾಸಿ ಸಿ.ಪಿ. ಹಮೀದ್-ಅವ್ವಮ್ಮ ದಂಪತಿಯ ಪುತ್ರ, ಉಪ್ಪಳ ಗೇಟ್‌ನಲ್ಲಿ ಆಟೋ ಚಾಲಕನಾಗಿರುವ ರಶೀದ್ (೫೮) ಸಾವನ್ನಪ್ಪಿದ ವ್ಯಕ್ತಿಯಾಗಿ ದ್ದಾರೆ. ಇವರು ಬೈಕ್ ಚಲಾಯಿಸುತ್ತಿದ್ದ ಹಿಂಬದಿಯ ಸವಾರ ಮುಸೋಡಿ ನಿವಾಸಿ ಹನೀಫ (೨೩) ಗಂಭೀರ ಗಾಯಗೊಂಡಿದ್ದಾರೆ.  ಇವರನ್ನು ಮಂಗಳೂರು ಆಸ್ಪತ್ರೆ ಯಲ್ಲಿ ದಾಖಲಿಸಲಾಗಿದೆ.  ಇಂದು ಬೆಳಿಗ್ಗೆ  ೬ ಗಂಟೆ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಉಪ್ಪಳ ಗೇಟ್‌ನಲ್ಲಿ ಆಟೋ ಚಾಲಕನಾಗಿರುವ ರಶೀದ್ ತನ್ನ ಕರ್ನಾಟಕದ ಡ್ರೈವಿಂಗ್ ಲೈಸನ್ಸ್ ಮರು ನೋಂದಾಯಿಸಲು ಗೆಳೆಯನೊಬ್ಬನ ಕೈಯಲ್ಲಿ ನೀಡಿದ್ದರು. ಅದು ಮರು ನೋಂದಾಯಿಸದ ಗೆಳೆಯ ಮರಳಿ ಇಂದು ಬೆಳಿಗ್ಗೆ  ತಲಪಾಡಿಗೆ ತಲುಪಿಸುವುದಾಗಿ ಹೇಳಿದ್ದರು.  ಅದರಂತೆ  ಲೈಸನ್ಸ್ ಪಡೆದಿದ್ದು, ರಶೀದ್ ಬೆಳಿಗ್ಗೆ ೬.೩೦ರ ವೇಳೆ ಗೆಳೆಯ ಹನೀಫನನ್ನು ಕುಳ್ಳಿರಿಸಿ ಮನೆಯಿಂದ ಹೊರಟಿದ್ದರು. ಪೊಸೋಟ್ ರಾಷ್ಟ್ರೀಯ ಹೆದ್ದಾರಿ ತಲುಪಿದಾಗ ಕಾಸರಗೋಡಿ ನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಕಾರು ಇವರ ಬೈಕ್‌ಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ರಶೀದ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು. ಗಾಯಗೊಂಡ ಹನೀಫರನ್ನು ಊರವರು ಸೇರಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ರಶೀದ್‌ರ ಮೃತದೇಹವನ್ನು ಉಪ್ಪಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತ ರಶೀದ್ ಪತ್ನಿ ಬೀಫಾ ತಿಮ್ಮ, ಮಕ್ಕಳಾದ ಅರ್ಫನ್, ಅಫೀನಾ, ಅಳಿಯ ಸಿದ್ದಿಕ್, ಸಹೋ ದರಿಯರಾದ ಸುಬೈದಾ, ಆಯಿಶಾಬಿ ಎಂಬವರನ್ನು ಅಗಲಿದ್ದಾರೆ.

NO COMMENTS

LEAVE A REPLY