ನೂತನ ಸರಕಾರ: ಒಂದೇ ಹಂತದಲ್ಲಿ ಪ್ರಮಾಣವಚನ 

0
58

ತಿರುವನಂತಪುರ: ಕೋವಿಡ್ ಹರಡುವಿಕೆಯ ಹಿನ್ನೆಲೆಯಲ್ಲಿ ಆಡಂಬ ರವಿಲ್ಲದೆ ದ್ವಿತೀಯ ಬಾರಿಗೆ ಅಧಿಕಾ ರಕ್ಕೇರಿದ ಪಿಣರಾಯಿ ವಿಜಯನ್‌ರ ಸರಕಾರದ ಪ್ರಮಾಣವಚನ ರಾಜ್ ಭವನದಲ್ಲಿ ನಡೆಸಲು ಸಿಪಿಎಂ ತೀರ್ಮಾನಿಸಿದೆ. ಮುಖ್ಯಮಂತ್ರಿ ಹಾಗೂ ಸಚಿವರು  ಒಂದೇ ಹಂತದಲ್ಲಿ ಪ್ರಮಾಣವಚನ ಸ್ವೀಕರಿಸಲು ತೀರ್ಮಾನಿಸಲಾಗಿದೆ. ಎಡರಂಗದ  ಸಭೆಯ ಬಳಿಕ ಈ ವಿಷಯದಲ್ಲಿ ಅಂತಿಮ ತೀರ್ಮಾನವುಂಟಾಗಲಿದೆ.

ಇದೇ ವೇಳೆ ಹೊಸಮುಖಗಳಿಗೆ ಆದ್ಯತೆ ನೀಡಲು ಚಿಂತನೆ ನಡೆಸಲಾ ಗಿದ್ದು, ಈ ಹಿಂದಿನ ಸರಕಾರದಲ್ಲಿದ್ದ ಸಚಿವರು ಯಾರೂ ನೂತನ ಸಚಿವ ಸಂ ಪುಟದಲ್ಲಿ ಇರಲಾರರು ಎಂದು ಹೇಳಲಾ ಗುತ್ತಿದೆ. ಕಳೆದ ಸಚಿವ ಸಂಪುಟದಲ್ಲಿದ್ದ ಎಂ.ಎಂ. ಮಣಿ, ಎ.ಸಿ. ಮೊಯ್ದೀನ್, ಕಡಗಂಪಳ್ಳಿ ಸುರೇಂದ್ರನ್, ಟಿ.ಪಿ. ರಾಮಕೃಷ್ಣನ್‌ರನ್ನು ನೂತನ ಸಚಿವ ಸಂಪುಟದಲ್ಲಿ ಸೇರಿಸಬೇಕಾಗಿ ಲ್ಲವೆಂದು ಬಹುತೇಕ ನಿರ್ಧರಿಸಲಾಗಿದೆ. ಆದರೆ ಶೈಲಜಾ ಟೀಚರ್ ವಿಷಯದಲ್ಲಿ ನಿರ್ಧಾರವುಂಟಾಗಿಲ್ಲ.

ಸರಕಾರ ರೂಪೀಕರಿಸುವ ಬಗ್ಗೆ ಇಂದು ಜರಗುವ ಸೆಕ್ರೆಟರಿಯೇಟ್ ಚರ್ಚೆ ನಡೆಸಲಿದೆ. ನಾಳೆ ಪೊಲಿಟ್ ಬ್ಯೂರೋ ಸಭೆ ಜರಗಲಿದ್ದು, ಮುಖ್ಯ ಮಂತ್ರಿಯನ್ನು ಪಿ.ಬಿ ತೀರ್ಮಾನಿಸಲಿದೆ. ಆದರೆ ಪಿಣ ರಾಯಿಯ ವಿಷಯದಲ್ಲಿ ಈ ರೀತಿಯ ತೀರ್ಮಾನ ಕೇವಲ ಔಪಚಾರಿಕ  ಕ್ರಮ ಮಾತ್ರವಾಗಲಿದೆ. ಉಳಿದ ಸಚಿವರ  ಬಗೆಗಿನ   ರಾಜ್ಯ ನೇತೃತ್ವದ ನಿರ್ದೇಶ ಗಳನ್ನು ಕೊಡಿ ಯೇರಿ ಬಾಲಕೃಷ್ಣನ್ ಪಿ.ಬಿ. ಸಭೆಯಲ್ಲಿ ಮಂಡಿಸುವರು.  ಈ ವಿಷಯದಲ್ಲಿ ತೀರ್ಮಾನವಾದ ಬಳಿಕ ರಾಜ್ಯಸಮಿತಿ ಸಭೆ ಹಾಗೂ ಎಡರಂಗದ ಸಭೆ ಜರಗಲಿದೆ. ಮುಂದಿನ ಸೋಮವಾರ ಸರಕಾರ ಅಧಿಕಾರಕ್ಕೇರುವ ನಿರೀಕ್ಷೆ ಇದೆ. ಇದರ ಮುಂಚಿತವಾಗಿ ಮಿತ್ರ ಪಕ್ಷಗಳೊಂದಿಗೆ ಚರ್ಚೆ ನಡೆಸಿ ಸಚಿವರು, ಇಲಾಖೆಗಳು ಎಂಬಿವುಗಳ ಬಗ್ಗೆ ಹೊಂದಾಣಿಕೆಗೆ ಬರಲಾಗುವುದು. ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳಲು  ಕೊಡಿಯೇರಿ ಬಾಲಕೃಷ್ಣನ್‌ರಿಗೆ ಹೊಣೆ ನೀಡುವ ಸಾಧ್ಯತೆಯಿದೆ. ಏಕ ಸದಸ್ಯನಿ ರುವ ಪಕ್ಷಗಳಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆಯಿಲ್ಲ. ಈ ಬಾರಿ ೫ ಮಿತ್ರ ಪಕ್ಷಗಳಿಗೆ ಓರ್ವ ಸದಸ್ಯನಿದ್ದಾರೆ. ಅಲ್ಲದೆ ಮಿತ್ರ ಪಕ್ಷವಲ್ಲದ ಆರ್‌ಎಸ್‌ಪಿ (ಲೆನಿನಿಸ್ಟ್) ಕೂಡಾ ಸರಕಾರವನ್ನು  ಬೆಂಬಲಿಸುತ್ತಿದೆ. ೫ ಕ್ಷೇತ್ರದಲ್ಲಿ ಜಯಗಳಿಸಿದ ಕೇರಳ ಕಾಂಗ್ರೆಸ್‌ಗೆ ಇಬ್ಬರು ಸಚಿವರನ್ನಾದರೂ ನೀಡಬೇಕಾಗಿದೆ.

NO COMMENTS

LEAVE A REPLY