ಕೋವಿಡ್ ಬಾಧಿತರ ಸಂಖ್ಯೆ ಇಳಿಮುಖದತ್ತ

0
15

ದಿಲ್ಲಿ: ದೇಶದಲ್ಲಿ ಪ್ರತಿದಿನ ಕೋವಿಡ್ ರೋಗ ಬಾಧಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ನಿನ್ನೆ ೯೪,೦೫೨ ಮಂದಿಗೆ ಕೋವಿಡ್ ದೃಢೀಕರಿಸಲಾಗಿದೆ ಎಂದು ಅಧಿಕೃತ ಲೆಕ್ಕಾಚಾರಗಳಿಂದ ತಿಳಿದು ಬಂದಿದೆ. ಇದೇ ವೇಳೆ ೨೪ ಗಂಟೆಯೊಳಗೆ ೬೧೪೮ ಮಂದಿ ಮೃತಪಟ್ಟಿರುವುದಾಗಿ ತಿಳಿಸಲಾಗಿದೆ. ಇದು ಅತೀ ಹೆಚ್ಚಿನ ಪ್ರತಿದಿನ ಸಾವಿನ ಸಂಖ್ಯೆಯಾಗಿದೆ.

ಕೇರಳದಲ್ಲಿ ನಿನ್ನೆ ೧೬೨೦೪ ಮಂದಿಗೆ ಕೋವಿಡ್ ಬಾಧಿಸಿದೆ. ಕಳೆದ ೨೪ ಗಂಟೆಯೊಳಗಾಗಿ ೧,೧೫,೦೨೨ ಮಂದಿಯ ಸ್ಯಾಂಪಲ್ ತಪಾಸಣೆ ನಡೆಸಲಾಗಿದೆ. ಟೆಸ್ಟ್ ಪಾಸಿಟಿವಿಟಿ ದರ ೧೪.೦೯ ಆಗಿದೆ.

ಇತ್ತೀಚೆಗಿನಿಂದ ಸಂಭವಿಸಿದ ೧೫೬ ಮಂದಿಯ ಸಾವು ಕೋ ವಿಡ್‌ನಿಂದಾಗಿದೆಯೆಂದು ದೃಢೀಕರಿ ಸಲಾಗಿದೆ. ಇದರೊಂದಿಗೆ  ರಾಜ್ಯದಲ್ಲಿ ಕೋವಿಡ್ ಬಾಧಿಸಿ ಮೃತಪಟ್ಟವರ ಸಂಖ್ಯೆ ೧೦೪೩೭ಕ್ಕೇರಿದೆ. ರೋಗ ಬಾಧಿಸಿ ಚಿಕಿತ್ಸೆಯಲ್ಲಿದ್ದ ೨೦,೨೩೭ ಮಂದಿ ನಿನ್ನೆ ರೋಗಮುಕ್ತರಾಗಿ ದ್ದಾರೆ. ಇದೀಗ ೧,೩೯,೦೬೪ ಮಂದಿ ಚಿಕಿತ್ಸೆಯಲ್ಲಿದ್ದಾರೆ.

NO COMMENTS

LEAVE A REPLY