ಕೋವಿಡ್ ತಗಲಿ ನಿವೃತ್ತ ಚಾಲಕ ನಿಧನ

0
16

ಬದಿಯಡ್ಕ: ಕೋವಿಡ್ ತಗಲಿ ಚಿಕಿತ್ಸೆಯಲ್ಲಿದ್ದ ಮೋಟಾರ್ ವಾಹನ ಇಲಾಖೆಯ ನಿವೃತ್ತ ಚಾಲಕ ನಿಧನರಾದರು. ತಿರುವನಂತಪುರ ನಿವಾಸಿ ಹಾಗೂ ಬದಿಯಡ್ಕ, ಬೀಜಂತಡ್ಕದಲ್ಲಿ ವಾಸಿಸುವ ಹಸನ್ ಕಣ್ಣು (೭೨) ನಿಧನರಾದ ವ್ಯಕ್ತಿ. ಹಲವು ವರ್ಷ ಕಾಲ   ಕಾಸರಗೋಡು ಆರ್‌ಟಿಒ ಕಚೇರಿಯಲ್ಲಿ ಚಾಲಕರಾಗಿದ್ದರು.

ಕೋವಿಡ್ ಬಾಧಿಸಿದ ಹಿನ್ನೆಲೆ ಯಲ್ಲಿ ಅವರು ಕಾಸರ ಗೋಡು ಖಾಸಗಿ ಆಸ್ಪತಯಲ್ಲಿ ದಾಖಲಾಗಿ ದ್ದರು. ಅನಂತರ ಅವರನ್ನು ಪರಿ ಯಾರಂ ವೈದ್ಯ ಕೀಯ ಕಾಲೇಜಿಗೆ ಕೊಂಡೊ ಯ್ಯಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ರಶೀದ (ನಿವೃತ್ತ ಶಿಕ್ಷಕಿ), ಮಕ್ಕಳಾದ ಫೆಮೀನಾ, ಡಾ. ಫೆಬೀನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY