ಕರ್ನಾಟಕದಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸಡಿಲ

0
16

ಬೆಂಗಳೂರು: ಕರ್ನಾಟಕ ದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಂತಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಜಿಲ್ಲಾಧಿ ಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಮಾಲೋಚನೆ ನಡೆಸುವರೆಂದು  ತಿಳಿದುಬಂದಿದೆ. ಕೊರೊನಾದ ಎರಡನೇ ಅಲೆ ಪ್ರಭಾವ ತಗ್ಗುತ್ತಿದ್ದರೂ ಕೆಲವು ಜಿಲ್ಲೆಗಳಲ್ಲಿ  ಗಂಭೀರ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ  ರಾಜ್ಯಾದ್ಯಂತ ಏಕ ಸ್ವರೂಪದ ಅನ್‌ಲಾಕ್ ಜ್ಯಾರಿಗೊಳಿ ಸುವುದರಲ್ಲಿ ಅನುಮಾನವಿದೆ ಯೆನ್ನಲಾಗಿದೆ.

NO COMMENTS

LEAVE A REPLY