ಉಪ್ಪಳ ಪರಿಸರದ ಗೂಂಡಾಗಳ ನಿಗ್ರಹಕ್ಕೆ ಪೊಲೀಸರಿಂದ ಪ್ರತ್ಯೇಕ ತಂಡ ರಚನೆ

0
21

ಕಾಸರಗೋಡು: ಉಪ್ಪಳ ಕೇಂದ್ರೀಕರಿಸಿ ಕಾರ್ಯಾಚರಿಸು ತ್ತಿರುವ  ರೌಡಿಗಳ ನಿಗ್ರಹಕ್ಕೆ ಪೊಲೀ ಸರು ಪ್ರತ್ಯೇಕ ತಂಡ ರಚಿಸಿದ್ದಾರೆ. ರಾಜ್ಯ ಡಿಜಿಪಿಯವರ ಆದೇಶದಂತೆ ಕಾಸರಗೋಡು ಡಿವೈಎಸ್ಪಿ ಪಿ.ಪಿ. ಸದಾನಂದನ್ ನೇತೃತ್ವದಲ್ಲಿ ಈ ತಂಡವನ್ನು ರಚಿಸಲಾಗಿದೆ. 

ಮಂಜೇಶ್ವರ, ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ ಇನ್‌ಸ್ಪೆಕ್ಟರ್‌ಗಳು, ಮಹಿಳಾ ಸೆಲ್ ಅಧಿಕಾರಿಗಳು ಈ ತಂಡದಲ್ಲಿದ್ದಾರೆ. ಕರಾಟೆ, ಫಯರಿಂಗ್, ಇತರ ಸಾಹಸಿಕ ತರಬೇತಿ ಹೊಂದಿದ ಪೊಲೀಸರನ್ನು ಈ ತಂಡದಲ್ಲಿಸೇರಿಸಲಾಗುತ್ತಿದೆ. ಮಂಜೇಶ್ವರ, ಕುಂಬಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೂಂಡಾಗಳ  ಗಲಭೆ ಉಂಟಾದಲ್ಲಿ ಕೂಡಲೇ ಈ ತಂಡ ಕಾರ್ಯಾಚರಣೆ ನಡೆಸಲಿದೆ. ಗೂಂಡಾಗಳನ್ನು ಹತ್ತಿಕ್ಕಲು ಜಿಲ್ಲಾ ಪೊಲೀಸ್ ಅಧಿಕಾರಿಯವರ ಮನವಿಯಂತೆ ಡಿಜಿಪಿಯವರು ಪ್ರತ್ಯೇಕ ತಂಡ ರಚನೆಗೆ ಆದೇಶ ನೀಡಿದ್ದಾರೆ.

ಕುಂಬಳೆ, ಮಂಜೇಶ್ವರ ಠಾಣೆ ವ್ಯಾಪ್ತಿಯಲ್ಲಿ ಗೂಂಡಾ ಹಾವಳಿ ವ್ಯಾಪಕವಾಗಿದೆ. ತಿಂಗಳುಗಳ ಹಿಂದೆ ಉಪ್ಪಳದಲ್ಲಿ ಗೂಂಡಾಗಳು ಹಾಡಹಗಲೇ ಗುಂಡು ಹಾರಾಟ ನಡೆಸಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರ ಮೇಲೂ ತಂಡ ಗುಂಡು ಹಾರಿಸಿದ್ದು, ಓರ್ವ ಪೊಲೀಸ್ ಅಧಿಕಾರಿಗೆ ಗಾಯವಾಗಿದೆ. ಅನಂತರ ಈ ತಂಡವನ್ನು ವಿಟ್ಲ ಪೊಲೀಸರು ಬಂಧಿಸಿದ್ದರು.   ಗೂಂಡಾ ತಂಡಗಳೊಳಗೆ ಪರಸ್ಪರ ಹಲ್ಲೆ, ಹಿಂಸಾಚಾರ, ಕೊಲೆ, ಕೊಲೆಯತ್ನ ಪ್ರಕರಣಗಳು ಈ ಪರಿಸರದಲ್ಲಿ ನಡೆಯುತ್ತಿದೆ. ಮರಳುದಂಧೆ, ಗಾಂಜಾದಂಧೆ, ಮದ್ಯ ಸಾಗಾಟ, ಕೊಟೇಶನ್ ಎಂಬೀ ಪ್ರಕರಣಗಳಲ್ಲಿ ಗೂಂಡಾ ಗಳು ಭಾಗಿಯಾಗುತ್ತಿದ್ದಾರೆ ನ್ನಲಾಗಿದೆ. ಈ ಹಿಂದೆ ಕುಂಬಳೆ, ಮಂಜೇಶ್ವರ ಠಾಣೆಯಲ್ಲಿದ್ದ ಕೆಲವು  ಪೊಲೀಸರು ಅನುಸರಿಸಿದ ಸಡಿಲ ನೀತಿಯೇ  ಗೂಂಡಾಗಳ ಅಟ್ಟಹಾಸ ಹೆಚ್ಚಲು ಕಾರಣವಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಹಲವು  ಕೊಲೆ, ಕೊಲೆಯತ್ನ, ಅಪಹರಣ, ಗುಂಡುಹಾರಾಟ ಪ್ರಕರಣಗಳನ್ನು ಗೂಂಡಾಗಳು ನಡೆಸಿದ್ದು, ಜನರ ನೆಮ್ಮದಿಗೆ ಭಂಗವುಂಟಾಗುತ್ತಿದೆ.

NO COMMENTS

LEAVE A REPLY