ನಿಯಂತ್ರಣಗಳ ಹೆಸರಲ್ಲಿ ಕಿರುಕುಳ ಆರೋಪ ಅಂಗಡಿಗಳ ಮುಚ್ಚಿ ವ್ಯಾಪಾರಿಗಳ ಚಳವಳಿ

0
16

ಕಾಸರಗೋಡು: ವ್ಯಾಪಾರ ವಲಯದಲ್ಲಿ ಸರಕಾರ ನಿಯಂ ತ್ರಣಗಳನ್ನು ಬಿಗಿಗೊಳಿಸುವುದನ್ನು ಪ್ರತಿಭಟಿಸಿ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ನೇತೃತ್ವದಲ್ಲಿ ವ್ಯಾಪಾರಿಗಳು ಇಂದು ಅಂಗಡಿಗಳನ್ನು ಮುಚ್ಚುಗಡೆಗೊಳಿಸಿ ಚಳವಳಿ ನಡೆಸುತ್ತಿದ್ದಾರೆ.

ಅಂಗಡಿಗಳನ್ನು ತೆರೆಯಲು ಅನುಮತಿಯಿಲ್ಲದ ವ್ಯಾಪಾರಿಗಳಿಗೆ ಬೆಂಬಲ ಸೂಚಿಸಿ, ಸಮಯ ಕ್ರಮ ಪಾಲಿಸಿ ಎಲ್ಲಾ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಒತ್ತಾಯಿಸಿ ವ್ಯಾಪಾರಿಗಳು ಇಂದು ಚಳವಳಿ ನಡೆಸುತ್ತಿದ್ದಾರೆ.

ಘಟಕ ವ್ಯಾಪ್ತಿಯ ಎಲ್ಲಾ ಸರಕಾರಿ ಕಚೇರಿಗಳ ಮುಂಭಾಗ ಕೋವಿಡ್ ನಿಯಂತ್ರಣಗಳನ್ನು ಪಾಲಿಸಿಕೊಂಡು ಚಳವಳಿ ನಡೆಸ ಲಾಗುತ್ತಿದೆ. ಮದ್ದಿನ ಅಂಗಡಿಗಳನ್ನು ಹೊರತುಪಡಿಸಿ ಇತರೆಲ್ಲಾ ಅಂಗಡಿ ಗಳನ್ನು ಇಂದು ಮುಚ್ಚುಗಡೆಗೊಳಿ ಸಲಾಗಿದೆ. ಕಳೆದ ಒಂದೂವರೆ ವರ್ಷ ದಿಂದ ವ್ಯಾಪಾರ ವಲಯ ಭಾರೀ ಸಂದಿಗ್ಧತೆಯಲ್ಲಿರುವಂತೆಯೇ ಕೋವಿಡ್‌ನ ದ್ವಿತೀಯ ಅಲೆಯ ಹಿನ್ನೆಲೆಯಲ್ಲಿ ಆರಂಭಿಸಿದ ಲಾಕ್‌ಡೌನ್ ಅನಿರ್ದಿಷ್ಟವಾಗಿ ಮುಂದುವರಿಯುತ್ತಿರುವುದು ವ್ಯಾಪಾರ ವಲಯಕ್ಕೆ ಭಾರೀ ಹೊಡೆತ ನೀಡಿದೆ ಎಂದು ದೂರಲಾ ಗಿದೆ. ಕಳೆದೊಂದು ತಿಂಗಳಿಂದ ಅಂಗಡಿಗಳನ್ನು  ತೆರೆಯಲಾಗದ ವ್ಯಾಪಾರಿಗಳಿದ್ದಾರೆ. ಅಧಿಕಾರಿಗಳ ಅವೈಜ್ಞಾನಿಕ ನಿಬಂಧನೆಗಳೇ ಇದಕ್ಕೆ ಕಾರಣವೆನ್ನಲಾಗಿದೆ.

NO COMMENTS

LEAVE A REPLY