ಅಪಪ್ರಚಾರ ವಿರುದ್ಧ ಬಿಜೆಪಿಯಿಂದ ಪ್ರತಿಭಟನಾ ಜ್ವಾಲೆ

0
19

ಕಾಸರಗೋಡು: ಬಿಜೆಪಿ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಸರಕಾರಿ ಕೃಪಾಪೋಷಿತ ಅಪಪ್ರಚಾರವನ್ನು ಪ್ರತಿಭಟಿಸಿ ಪಕ್ಷದ ವತಿಯಿಂದ  ಇಂದು ರಾಜ್ಯಾದ್ಯಂತ ಪ್ರತಿಭಟನಾ ಜ್ವಾಲೆ ನಡೆದಿದೆ.

ಕಾಸರಗೋಡು ಜಿಲ್ಲೆಯ  ಒಂದು ಸಾವಿರ ಕಡೆಗಳಲ್ಲಿ  ಸಹಿತ ರಾಜ್ಯದ ಎಲ್ಲಾ ಕಡೆಗಳಲ್ಲೂ ಪ್ರತಿಭಟನಾ ಜ್ವಾಲೆ ಹಮ್ಮಿಕೊಳ್ಳಲಾಗಿದೆ. ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಪಿ.ಕೆ.ಕೃಷ್ಣದಾಸ್ ಕಾಸರಗೋಡಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಿದರು. ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್,  ರಾಜ್ಯ ಸಮಿತಿ ಸದಸ್ಯರಾದ ಪಿ. ರಮೇಶ್, ಸುರೇಶ್ ಕುಮಾರ್ ಶೆಟ್ಟಿ, ಧನಂಜಯ ಮಧೂರು, ಹರೀಶ್ ನಾರಂಪಾಡಿ, ಸುಧಾಮ ಗೋಸಾಡ, ಮಣಿಕಂಠ ರೈ ಸಹಿತ ನೇತಾರರು ವಿವಿಧ  ಪ್ರತಿಭಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಜಿಲ್ಲೆಯ ಒಂದು ಸಾವಿರ ಕೇಂದ್ರಗಳಲ್ಲಿ ಪ್ರತಿಭಟನೆ ನಡೆದಿದೆಯೆಂದು ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ತಿಳಿಸಿದ್ದಾರೆ.

ಪೈವಳಿಕೆ ಪಂಚಾಯತ್‌ನ ಕಯ್ಯಾರು ೧೧೪ನೇ ಬೂತ್ ಜೋಡುಕಲ್ಲಿನಲ್ಲಿ ನಡೆದ ಪ್ರತಿಭಟನೆಯನ್ನು ಪೈವಳಿಕೆ ಪಂ. ಬಿಜೆಪಿ ಅಧ್ಯಕ್ಷ ಲೋಕೇಶ್ ನೋಂಡಾ ಉದ್ಘಾಟಿಸಿದರು. ರಾಜ್ಯ ಎಸ್‌ಸಿ ಮೋರ್ಛಾ  ಉಪಾಧ್ಯಕ್ಷ ಎ.ಕೆ. ಕಯ್ಯಾರ್, ಮುಖಂಡರಾದ ಪ್ರಸಾದ್ ರೈ, ಜಗದೀಶ ಬಿ.ಸಿ.ರೋಡು, ಪ್ರವೀಣ್ ಕೆ.ಪಿ. ಪಟ್ಲ ಭಾಗವಹಿಸಿದರು. ಮಂಗಲ್ಪಾಡಿ ಪಂ. ಸಮಿತಿ ವತಿಯಿಂದ  ಐಲ ಕಚೇರಿ ಬಳಿ ನಡೆದ ಪ್ರತಿಭಟನೆಯನ್ನು ಪಂ. ಸಮಿತಿ ಅಧ್ಯಕ್ಷ ವಸಂತ ಕುಮಾರ್ ಮಯ್ಯ, ಯುವಮೋರ್ಛಾ ಪಂ. ಅಧ್ಯಕ್ಷ ಅವಿನಾಶ್ ಮುಖಂಡರಾದ ಧನರಾಜ್ ಪ್ರತಾಪನಗರ, ಅನಿಲ್ ಕುಮಾರ್ ಶಿವಾಜಿನಗರ,ಶರತ್ ಕುಮಾರ್ ಪ್ರತಾಪನಗರ ಭಾಗವಹಿಸಿದರು. ಮಂಗಲ್ಪಾಡಿ ಪಂಚಾಯತ್ ಹಾಗೂ ಪೈವಳಿಕೆ ಪಂಚಾಯತ್‌ನ ವಿವಿಧ ಬೂತ್‌ಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ.

NO COMMENTS

LEAVE A REPLY