ಕೋವಿಡ್ ನಿಯಂತ್ರಣದ ಮಧ್ಯೆ ವ್ಯಾಪಕಗೊಂಡ ಗೂಗಲ್ ಮೀಟ್

0
61

ಬದಿಯಡ್ಕ: ಕೋವಿಡ್ ಮಹಾಮಾರಿಯ ಒಂದನೇ ಹಾಗೂ ಎರಡನೇ ಅಲೆಯು ಸಮಾಜದಲ್ಲಿ ಇಂಟರ್‌ನೆಟ್ ಕ್ರಾಂತಿಯನ್ನೇ ಉಂಟುಮಾಡಿದೆ. ಸರಕಾರದ ನಿಯಂತ್ರಣದಿಂದ ಸಾರ್ವಜನಿಕ, ಖಾಸಗಿ ಸಭೆಗಳು ನಡೆಯದಿದ್ದರೂ ಬಹುತೇಕ ಸಭೆ, ಚರ್ಚಾಕೂಟ, ಇತರ ಕಾರ್ಯಕ್ರಮಗಳು ಗೂಗಲ್ ಆನ್‌ಲೈನ್ ಮೂಲಕ ನಡೆಯುತ್ತಿದೆ. ಈ ಮೂಲಕ ಜನರು ಇಂಟರ್‌ನೆಟ್ ಬಳಸಿ, ಮನೆಯಲ್ಲಿಯೇ ಕುಳಿತು ಬಹುತೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದಾಗಿದೆ.

ರಾಜಕೀಯ ಪಕ್ಷಗಳ ರಾಷ್ಟ್ರೀಯ, ರಾಜ್ಯ, ಜಿಲ್ಲಾ, ಸ್ಥಳೀಯ ಸಮಿತಿಗಳ ಸಭೆಯು ಬಹುತೇಕ ಗೂಗಲ್ ಮೀಟ್ ಆಗಿ ಬದಲಾಗಿದೆ. ಬಹುತೇಕ ರಾಜಕೀಯ ವ್ಯಕ್ತಿಗಳು ಈಗಾಗಲೇ ೧೦ಕ್ಕೂ ಹೆಚ್ಚು ಗೂಗಲ್ ಸಭೆಗಳನ್ನು ನಡೆಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೋವಿಡ್ ರೋಗ ಹರಡುವಿಕೆಯ ಬಗ್ಗೆ ಈ ಹಿಂದೆಯೇ ಗೂಗಲ್ ಸಭೆ ಹಲವು ಬಾರಿ ನಡೆಸಿದ್ದರು. ವಿವಿಧ ಮುಖ್ಯಮಂತ್ರಿಗಳ, ಸಚಿವ ಸಂಪುಟ ಸಭೆ, ಇತರ ಅಧಿಕಾರಿಗಳ ಸಭೆಗಳನ್ನು ಗೂಗಲ್ ಮೀಟ್ ಮೂಲಕ ನಡೆಸುತ್ತಿದ್ದಾರೆ.

ಇದೀಗ ಪ್ರಾದೇಶಿಕ ಮಟ್ಟದಲ್ಲಿ ಗೂಗಲ್ ಮೀಟ್ ಸಭೆಗಳು ನಡೆಯಲಾ ರಂಭಿಸಿವೆ. ವಿವಿಧೆಡೆ ಕ್ಲಬ್‌ಗಳ, ದೇವಸ್ಥಾನ, ದೈವಸ್ಥಾನ, ತರವಾಡು, ಕಳಗಂ ಸಭೆಗಳು ಇದೀಗ ಗೂಗಲ್ ಮೀಟ್ ಮೂಲಕ ನಡೆಯುತ್ತಿವೆ. ಸ್ಥಳೀಯ ಮಟ್ಟದಲ್ಲಿ  ನಡೆಯುವ ವಾರದ, ತಿಂಗಳ ಕುರಿಗಳೂ ಕೂಡಾ ಗೂಗಲ್‌ಮೀಟ್ ಮೂಲಕ ನಡೆಯ ಲಾರಂಭಿಸಿವೆ. ಕುರಿ ವಾರು ಮಾಡುವ ಮೊದಲು ಸದಸ್ಯರು ಗೂಗಲ್ ಪೇ ಮೂಲಕ ಹಣ ಪಾವತಿಸಬೇಕು. ಅನಂತರ ನಿಶ್ಚಿತ ಸಮಯದಲ್ಲಿ ಗೂಗಲ್ ಮೀಟ್ ಮೂಲಕವೇ ಕುರಿಯ ವಾರು ನಡೆಯುತ್ತಿದೆ. ವಾಟ್ಸಪ್ ಸಹಿತ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹಿಂದೆಯೂ ವಿವಿಧ ಕಡೆಗಳಲ್ಲಿನ ನಿಶ್ಚಿತ ಮಂದಿ ಒಂದಾಗಿ ಪರಸ್ಪರ ಮಾಹಿತಿ ಗಳನ್ನು ಹಂಚಿಕೊಳ್ಳುವ ಸೌಲಭ್ಯವಿತ್ತು.

ಕೋವಿಡ್ ಎರಡನೇ ಅಲೆಯಿಂದಾಗಿ ಜನರು ಸಂಕಷ್ಟದಲ್ಲಿ ಸಿಲುಕಿದ್ದರೂ, ಇಂಟರ್‌ನೆಟ್ ಮೂಲಕ ನಡೆದ ಈ ಕ್ರಾಂತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಚಾರ ಪಡೆಯಲಿದೆ.

NO COMMENTS

LEAVE A REPLY