ಕಿಚ್ಚಿಟ್ಟು ಯುವತಿಯ ಕೊಲೆ ಪ್ರಿಯಕರ ಪೊಲೀಸ್ ಬಲೆಗೆ

0
86

ಕೊಲ್ಲಂ: ಪ್ರಿಯತಮನನ್ನು ಯುವಕನೋರ್ವ ಕಿಚ್ಚಿಟ್ಟು ಕೊಲೆಗೈದ ಪ್ರಕರಣದ ನಡೆದಿದೆ.  ಕೊಲ್ಲಂ ಕೊಪಳ್ಳಿಮುರ್ ನಿವಾಸಿ ಆದಿರಾ ಕೊಲೆಗೈಯ್ಯಲ್ಪಟ್ಟ ಯುವತಿಯಾಗಿದ್ದು, ಈಕೆಯ ಪ್ರಿಯಕರ ಶಾನವಾಸ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕೊಲೆಗೀಡಾದ ಆದಿರಾ ಈ ಹಿಂದೆ ವಿವಾಹಿತಳಾ ಗಿದ್ದು, ಎರಡು ಮಕ್ಕಳತಾಯಿ ಯಾಗಿದ್ದಾಳೆ. ಆರೋಪಿ ಶಾನವಾ ಸ್‌ನೂ ವಿವಾಹಿತನಾಗಿದ್ದು, ಎರಡು ಮಕ್ಕಳ ತಂದೆಯಾಗಿದ್ದಾನೆ. ಕಳೆದ ಎರಡು ವರ್ಷಗಳಿಂದ ಆದಿರಾ ಹಾಗೂ ಶಾನವಾಸ್ ಜೊತೆಯಾಗಿ ವಾಸಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ಮನೆ ಯೊಳಗೆ ಆದಿರಾಳನ್ನು  ಸುಟ್ಟಗಾಯ ಗಳೊಂದಿಗೆ ಕಂಡುಬಂದಿದ್ದು, ಕೂಡಲೇ ಆಸ್ಪತ್ರೆಯಲ್ಲಿ ದಾಖಲಿಸ ಲಾಯಿತು. ಶಾನವಾಸ್ ಕಿಚ್ಚಿಟ್ಟ ನೆಂದು  ಆದಿರಾ ಪೊಲೀಸರಲ್ಲಿ ತಿಳಿಸಿದ್ದು ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಆದಿರಾ ನಿನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

NO COMMENTS

LEAVE A REPLY