ಮನೆಯಿಂದ ನಗನಗದು, ಟಿವಿ ಕಳವು

0
79

ನೀರ್ಚಾಲು: ಇರಿತ ಪ್ರಕರಣದಲ್ಲಿ ಜೈಲು ಸೇರಿದ ಆರೋಪಿಯ ಮನೆಯಿಂದ ಚಿನ್ನಾಭರಣ ಸಹಿತ ನಗದು ಕಳವುಗೈದ ಘಟನೆ ನಡೆದಿದೆ. ನೀರ್ಚಾಲು, ಕಡಂಬಳ ನಿವಾಸಿ ರಾಮಕೃಷ್ಣನ್‌ರ ಮನೆಯಿಂದ ಕಳವು ನಡೆದಿದ್ದು,  ಈ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಮನೆಯ ಮುಂ ಬಾಗಿಲು ಮುರಿದು ೧ ಪವನ್ ತೂಕದ ಉಂಗುರ,  ೩ ಸಾವಿರ ರೂ. ನಗದು, ೨ ಸಾವಿರ ರೂ. ಬೆಲೆಯ ವಾಚ್, ೧೬ ಸಾವಿರ ರೂ. ಬೆಲೆಯ ೩೨ ಇಂಚು ಟಿ.ವಿ. ಎಂಬಿವುಗಳನ್ನು  ಕಳವು ಗೈಯ್ಯ ಲಾಗಿದೆಯೆಂದು ದೂರಲಾಗಿದೆ.

೧೦ ದಿನಗಳ ಹಿಂದೆ ಕಡಂಬಳ ನಿವಾಸಿ ಅಬ್ದುಲ್ ಕರೀಂ ಎಂಬಿವರಿಗೆ ಇರಿದ ಪ್ರಕರಣ ಉಂಟಾಗಿತ್ತು. ಈ ಪ್ರಕರಣದಲ್ಲಿ ರಾಮಕೃಷ್ಣನ್‌ರ ವಿರುದ್ಧ ನರಹತ್ಯಾಯತ್ನ ಪ್ರಕರಣದಂತೆ ಕೇಸು ದಾಖಲಿಸಲಾಗಿತ್ತು. ರಾಮಕೃಷ್ಣನ್‌ರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದು, ರಿಮಾಂಡ್ ವಿಧಿಸಲಾಗಿತ್ತು. ಎರಡು ದಿನಗಳ ಹಿಂದೆ ರಾಮಕೃಷ್ಣನ್ ಜಾಮೀನಿನಲ್ಲಿ ಬಿಡುಗಡೆಗೊಂಡು ಮನೆಗೆ ಬಂದಾಗ ಕಳವು ಪ್ರಕರಣ ಗಮನಕ್ಕೆ ಬಂದಿದೆ. ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದಾರೆ.

NO COMMENTS

LEAVE A REPLY