೩೧.೨೦೦ ಲೀಟರ್ ಕರ್ನಾಟಕ ಬಿಯರ್ ವಶ

0
63

ಕುಂಬಳೆ: ಶೆಡ್‌ನಿಂದ ೩೧.೨೦೦ ಲೀಟರ್ ಕರ್ನಾಟಕ ನಿರ್ಮಿತ ಬಿಯರ್ ಕುಂಬಳೆ ಅಬಕಾರಿ ರೇಂಜ್ ಅಧಿಕಾರಿಗಳು ವಶಪಡಿಸಿದ್ದಾರೆ. ಆರೋಪಿ ಪರಾರಿಯಾಗಿದ್ದಾನೆ. ನಿನ್ನೆ ಸಂಜೆ ೬.೧೫ರ ವೇಳೆ ಒಡ್ಡಂಬೆಟ್ಟು ಎಂಬಲ್ಲಿ ವ್ಯಕ್ತಿಯ ಹಿತ್ತಿಲಿನಲ್ಲಿ ತರ್ಪಾಲ್ ಹಾಸಿದ ಶೆಡ್‌ವೊಂದರಿಂದ ೬೫೦ ಮಿಲ್ಲಿಯ ೪೮ ಬಾಟಲಿ ಬಿಯರ್ ವಶಪಡಿಸಿದ್ದಾರೆ. ಈ ಸಂಬಂಧ ಕುಬಣೂರು ವಿಲ್ಲೇಜ್‌ನ ಒಡ್ಡಂಬೆಟ್ಟು ನಿವಾಸಿ ಮಂಜುನಾಥ ಕೆ. (೨೯) ಎಂಬಾ ತನ ವಿರುದ್ಧ ಕೇಸು ದಾಖಲಿಸಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ. ಕುಂಬಳೆ ಅಬ ಕಾರಿ ರೇಂಜ್ ಇನ್ಸ್‌ಪೆಕ್ಟರ್ ಅಖಿಲ್ ಎ, ಪ್ರಿವೆಂಟಿವ್ ಆಫೀಸರ್ ರಾಜೀ ವನ್, ಸಿವಿಲ್ ಎಕ್ಸೈಸ್ ಆಫೀಸರ್ ನಸ್ರುದ್ದೀನ್ ಎ.ಕೆ, ಚಾಲಕ ಸಬಿತ್ ಲಾಲ್ ಕಾರ್ಯಾಚರಣೆ ನಡೆಸಿದ್ದಾರೆ.

NO COMMENTS

LEAVE A REPLY