ಕುಂಟಂಗೇರಡ್ಕದಲ್ಲಿ ಅರಣ್ಯ ಅಧಿಕಾರಿಗಳಿಂದ ಶೋಧ: ಪತ್ತೆಯಾದ ಪ್ರಾಣಿ ಹುಲಿಯಲ್ಲವೆಂದು ಸ್ಪಷ್ಟನೆ

0
63

ಉಪ್ಪಳ: ಕುಂಟಂಗೇರಡ್ಕ ಸುಬ್ಬಯ್ಯಕಟ್ಟೆ ಪರಿಸರದಲ್ಲಿ ಪತ್ತೆಯಾದ ಪ್ರಾಣಿ ಹುಲಿಯಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಸಲಾಂ ಎಂಬವರ ಮನೆಯ ಸಿಸಿಯಲ್ಲಿ ಸೆರೆಯಾದ ದೃಶ್ಯವನ್ನು ಪರಿಶೀಲಿಸಿ ಅರಣ್ಯ ಅಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ನಿನ್ನೆ ಮಧ್ಯಾಹ್ನ ಕಾಸರಗೋಡಿನಿಂದ ನಾಲ್ಕು ಮಂದಿ ಅರಣ್ಯ ಅಧಿಕಾರಿಗಳ ತಂಡ ತಲುಪಿ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ.

೯ರಂದು ರಾತ್ರಿ ವ್ಯಾಪಾರಿ ರಫೀಖ್ ಕಾರಿನಲ್ಲಿ ಸಂಚರಿಸುವಾಗ  ಸುಬ್ಬಯ್ಯಕಟ್ಟೆ ಕುಂಟಂಗೇರಡ್ಕದಲ್ಲಿ ರಸ್ತೆಯಲ್ಲಿ ಪ್ರಾಣಿಯೊಂದು ಪತ್ತೆಯಾಗಿತ್ತು. ಇದು ಹುಲಿಯಾಗಿರಬೇಕೆಂದು ರಫೀಖ್ ಶಂಕಿಸಿದ ಹಿನ್ನೆಲೆಯಲ್ಲಿ ಈ ಪ್ರದೇಶದ ಜನರು ಭೀತಿಯಲ್ಲಿದ್ದರು. ಈ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಲಭಿಸಿದ ಸಿಸಿಟಿವಿ ದೃಶ್ಯವನ್ನು ಪರಿಶೀಲಿ ಸಲಾಗಿದೆ. ಚಿರತೆ ಅಥವಾ ಈ ರೀತಿಯ ಇನ್ಯಾವುದೇ ಪ್ರಾಣಿ ಇದಾಗಿರಬೇಕೆಂದು ಅರಣ್ಯ ಅಧಿಕಾರಿಗಳು ತಿಳಿಸುತ್ತಾರೆ.

NO COMMENTS

LEAVE A REPLY