ಕೋವಿಡ್ ಬಾಧಿಸಿ ಮಹಿಳೆ ಸಹಿತ ಇಬ್ಬರು ಮೃತ್ಯು

0
67

ಹೊಸದುರ್ಗ: ಕೋವಿಡ್ ತಗಲಿ ಚಿಕಿತ್ಸೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಕಾಞಂಗಾಡ್ ತಾಯನ್ನೂರು ನಿವಾಸಿ ಒ. ರಾಧಾ(೬೨) ಕೋವಿಡ್‌ನಿಂದ ಮೃತಪಟ್ಟರು. ಕಳೆದ ಒಂದು ತಿಂಗಳಿಂದ ಚಟ್ಟಂಚಾಲು ಟಾಟಾ ಕೋವಿಡ್ ಆಸ್ಪತ್ರೆಯಲ್ಲಿ ರಾಧಾ ಚಿಕಿತ್ಸೆಯಲ್ಲಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದರು.

ಮೃತರು ಪತಿ ದಾಮೋದರನ್, ಮಕ್ಕಳಾದ ಗೀತಾ, ಭರತನ್ (ಪರಿಶಿಷ್ಟ ಜಾತಿ ಮೋರ್ಛಾ ರಾಜ್ಯ ಕಾರ್ಯದರ್ಶಿ), ಅಳಿಯ ಬಾಲಕೃಷ್ಣನ್, ಸೊಸೆ ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮೆಡಿಕಲ್ ಶಾಪ್ ಮಾಲಕ ಕೋವಿಡ್ ತಗಲಿ ಮೃತಪಟ್ಟ ಘಟನೆ ನಡೆದಿದೆ. ಪೆರಿಯದ ಕವಿತಾ ಮೆಡಿಕಲ್  ಮಾಲಕ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರಿಯ ಯೂನಿಟ್ ಮಾಜಿ ಅಧ್ಯಕ್ಷ ನರಸಿಂಹ ಕೆದಿಲ್ಲಾಯ (೫೬) ಮೃತಪಟ್ಟ ವ್ಯಕ್ತಿ. ಕಳೆದ ೧೦ ದಿನಗಳಿಂದ ಕೋವಿಡ್ ಬಾಧಿಸಿ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೂರು ದಿನಗಳ ಹಿಂದೆ ಇವರ ಆರೋಗ್ಯ ಸ್ಥಿತಿ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಿನ್ನೆ ಕೊನೆಯುಸಿರೆಳೆದರು.

ಮೃತರು ಪತ್ನಿ ಅನುಪಮ, ಮಕ್ಕಳಾದ ಅರ್ಚನ, ಅನನ್ಯ, ಸಹೋದರ-ಸಹೋದರಿಯರಾದ ವೆಂಕಟೇಶ್,ಶ್ರೀಧರನ್, ದಾಮೋದರನ್, ಹರಿಕೃಷ್ಣನ್, ದೀಪಿಕ ಮೊದಲಾದವರನ್ನು ಅಗಲಿದ್ದಾರೆ. 

NO COMMENTS

LEAVE A REPLY