ನಾಮಪತ್ರ ಹಿಂಪಡೆಯಲು ಹಣ ನೀಡಿಕೆ: ಮುಂದುವರಿದ ತನಿಖೆ

0
68

ಕಾಸರಗೋಡು: ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿ ಕೆ. ಸುಂದರರ ನಾಮಪತ್ರ ಹಿಂದಕ್ಕೆ ಪಡೆಯಲು ಲಂಚ ನೀಡಲಾಗಿದೆ ಎಂಬ ರೋಪದ ತನಿಖೆ ಮುಂದುವರಿಯುತ್ತಿದೆ. ತನಿಖೆ ನಡೆಸುವ ಕ್ರೈಂಬ್ರಾಂಚ್ ಅಧಿಕಾರಿಗಳು ವಶಪಡಿಸಿದ ಮೊಬೈಲ್ ಫೋನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಫೋನ್ ಮರಳಿ ವಶಕ್ಕೆ ಪಡೆದು, ಸೈಬರ್ ಸೆಲ್ ಮೂಲಕ ತನಿಖೆ ನಡೆಸಲಾಗುವುದು.ನಾಮಪತ್ರ ಹಿಂದಕ್ಕೆ ಪಡೆಯಲು ತನಗೆ ಎರಡುವರೆ ಲಕ್ಷ ರೂ. ಲಂಚ ನೀಡಲಾಗದೆಯೆಂದು ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ದೂರಿದ್ದರು. ಈ ಬಗ್ಗೆ ಸಿಪಿಎಂ ನೇತಾರ ವಿ.ವಿ. ರಮೇಶ್ ನೀಡಿದ ದೂರಿನಂತೆ, ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದರು. ಅನಂತರ ಈ ಪ್ರಕರಣವನ್ನು ಕ್ರೈಂಬ್ರಾಂಚ್‌ಗೆ ವಹಿಸಲಾಗಿತ್ತು. ಇದೇ ವೇಳೆ ಸುಂದರರಿಗೆ ನೀಡಿದೆ ಎನ್ನಲಾದ ಹಣದಲ್ಲಿ ೧ಲಕ್ಷ ರೂ. ಕ್ರೈಂಬ್ರಾಂಚ್ ಅಧಿಕಾರಿಗಳು ವಶಪಡಿಸಿದ್ದಾರೆ.

ಕ್ರೈಂಬ್ರಾಂಚ್ ಅಧಿಕಾರಿಗಳು ಕೆ. ಸುಂದರ ಅವರ ತಾಯಿಯನ್ನು ಭೇಟಿಯಾಗಿ ಹೇಳಿಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ವಿರುದ್ಧ ಕ್ರೈಂಬ್ರಾಂಚ್ ಕೇಸು ದಾಖಲಿಸಿತ್ತು.ಇದೇ ವೇಳೆ ತನಗೆ ನೀರ್ಚಾಲಿನ ಅಂಗಡಿಯೊಂದರಿಂದ ಮೊಬೈಲ್ ಫೋನ್ ಖರೀದಿಸಿ ಬಿಜೆಪಿ ನೇತಾರರು ನೀಡಿದ್ದಾರೆ ಎಂದು ಕೆ. ಸುಂದರ ಹೇಳಿದ್ದಾರೆ.ಇದೇ ವೇಳೆ ಮಂಜೇಶ್ವರ ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಬಿಜೆಪಿ ಹಾಗೂ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್‌ರ ವಿರುದ್ಧ ಎಡ-ಬಲ ರಂಗಗಳ ಹಾಗೂ ರಾಜ್ಯ ಸರಕಾರ ನಡೆಸುವ ಅಪಪ್ರಚಾರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯ ವಾದಿ ಕೆ. ಶ್ರೀಕಾಂತ್ ಹೇಳಿದ್ದಾರೆ.

NO COMMENTS

LEAVE A REPLY