೨೧.೪೨ ಲೀ. ಮದ್ಯ ಸಹಿತ ಆಟೋ ವಶ

0
127

ಹೊಸಂಗಡಿ: ಆಟೋರಿಕ್ಷಾದಲ್ಲಿ ೨೧.೪೨ ಲೀಟರ್ ಕರ್ನಾಟಕ ಮದ್ಯ ಹಾಗೂ ೯ ಲೀಟರ್ ಬಿಯರನ್ನು ಸಾಗಿಸುತ್ತಿದ್ದ ಮಧ್ಯೆ ಅಬಕಾರಿ ಅಧಿಕಾರಿಗಳನ್ನು ಕಂಡು ಮದ್ಯ, ವಾಹನ ಉಪೇಕ್ಷಿಸಿ ಪರಾರಿಯಾದ ವ್ಯಕ್ತಿ ವಿರುದ್ಧ ಕೇಸು ದಾಖಲಿಸಲಾಗಿದೆ. ಹೊಸಬೆಟ್ಟು ಬೀಚ್‌ನಲ್ಲಿ ಕುಂಬಳೆ ರೇಂಜ್ ಅಧಿಕಾರಿಗಳು ಕಾರ್ಯಾ ಚರಣೆ ನಡೆಸಿದ್ದರು. ಸ್ಥಳೀಯ ನಿವಾಸಿ ಹರೀಶ್ ಅಲಿಯಾಸ್ ಹರಿಪ್ರಸಾದ್ ವಿರುದ್ಧ ಕೇಸು ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪ್ರಿವೆಂಟಿವ್ ಆಫೀಸರ್ ಪಿ. ಮೋಹನನ್, ಸಿಇಒಗಳಾದ ಸುಧೀಶ್, ಹಮೀದ್, ಚಾಲಕ ಇ.ಕೆ. ಸತ್ಯನ್ ಭಾಗವಹಿಸಿದರು.

NO COMMENTS

LEAVE A REPLY