ಎಂ.ಬಿ.ಬಿ.ಎಸ್ ವಿದ್ಯಾರ್ಥಿ ನಿದ್ದೆಯಲ್ಲಿ ನಿಧನ

0
228

ಕಾಸರಗೋಡು: ಎಂಬಿಬಿಎಸ್ ವಿದ್ಯಾರ್ಥಿ ನಿದ್ದೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.ಅಡ್ಕತ್ತಬೈಲುಗುತ್ತು ರೋಡ್ ತೊಯ್ಬಾ ಹೌಸ್‌ನ ನಿವಾ ಸಿಯೂ, ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯ ಡಾ| ಅಬ್ದುಲ್ ಸತ್ತಾರ್‌ರ ಪುತ್ರ ಶಹಲ್ ರಹ್ಮಾನ್ (೨೨) ಮೃತಪಟ್ಟ ವಿದ್ಯಾರ್ಥಿ. ಇವರು ಮಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿ ದ್ದಾರೆ. ನಿನ್ನೆ ರಾತ್ರಿ  ಇವರು ಊಟಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಅವರು ಎದ್ದಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಬ್ಬಿಸಲು ಪ್ರಯತ್ನಿಸಿದಾಗ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆಂದು ತಿಳಿದುಬಂದಿದೆ.

ಮೃತರು ತಂದೆ, ತಾಯಿ ಶಮೀಮ, ಸಹೋದರ ಸಾಬಿತ್ ರಹ್ಮಾನ್ (ಎಂಬಿಬಿಎಸ್ ವಿದ್ಯಾರ್ಥಿ), ಸಹೋದರಿ ಸನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

NO COMMENTS

LEAVE A REPLY