ಮುಸ್ಲಿಂ ಲೀಗ್ ಮುಖಂಡ ನಿಧನ

0
130

ಉಪ್ಪಳ: ಮುಸ್ಲಿಂ ಲೀಗ್ ಮುಖಂಡ, ಮಂಜೇಶ್ವರ ಬ್ಲೋಕ್ ಪಂಚಾಯತ್ ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಬಹರೈನ್ ಮುಹಮ್ಮದ್ (೭೫) ನಿನ್ನೆ ಸಂಜೆ ಕುಕ್ಕಾರಿನಲ್ಲಿರುವ ಸ್ವ-ಗೃಹದಲ್ಲಿ ನಿಧನಹೊಂದಿದರು. ಚೆರ್ಕಳ ಅಬ್ದುಲ್ಲರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಜಿಲ್ಲೆಗೆ ತಲುಪಿದಾಗ ತೃಕರಿಪುರದಲ್ಲಿ ನೀಡಿದ ಸ್ವಾಗತ ವೇಳೆ ಉಂಟಾದ ಘರ್ಷಣೆಯಲ್ಲಿ ಇವರು ಒಂದು ಕಣ್ಣಿನ ದೃಷ್ಟಿ ಕಳೆದುಕೊಂ ಡಿದ್ದರು.  ಪತ್ನಿ ನಫೀಸ ಒಂಭತ್ತು ತಿಂಗಳ ಹಿಂದೆ ನಿಧನಹೊಂದಿದ್ದಾರೆ.

ಮೃತರು ಮಕ್ಕಳಾದ ಯಾಸ್ಮಿನ್, ಶಾನವಾಸ್, ಶಾಜ ಹಾನ್, ಶಬೀರ್, ಅಳಿಯ ಇಂತಿ ಯಾಸ್, ಸೊಸೆಯಂದಿರಾದ ಉಮೈರ ಬದಿಯಡ್ಕ,ಸುರಯ ಮೊಗ್ರಾಲ್, ನಶೀದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 

NO COMMENTS

LEAVE A REPLY