ಉಪೇಕ್ಷಿತ ಸ್ಥಿತಿಯಲ್ಲಿ ಮಾರುತಿ ವ್ಯಾನ್ ಪತ್ತೆ

0
36

ಮಂಜೇಶ್ವರ: ಇಲ್ಲಿನ ಚೆಕ್‌ಪೋಸ್ಟ್ ಬಳಿ ಉಪೇಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಮಾರುತಿ ಒಮ್ನಿ ವ್ಯಾನ್ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಈ ವ್ಯಾನ್ ರಸ್ತೆ ಬದಿಯಲ್ಲಿ ಉಪೇಕ್ಷಿಸಲ್ಪಟ್ಟ ಸ್ಥಿತಿಯಲ್ಲಿ ಕಂಡುಬಂತು. ಸ್ಥಳೀಯರು ನೀಡಿದ ಮಾಹಿತಿಯನ್ವಯ ಪೊಲೀಸರು ಆಗಮಿಸಿ ವ್ಯಾನ್ ಠಾಣೆಗೊಯ್ದರು. ವ್ಯಾನ್‌ನಮುಂಭಾಗದಲ್ಲಿ ಮಾತ್ರ ನಂಬರ್ ಪ್ಲೇಟ್ ಇತ್ತೆನ್ನಲಾಗಿದೆ. ಇದರ ಮುಂಭಾಗದಲ್ಲಿ ಮಾತ್ರ  ಸೀಟು ಇದೆಯೆಂದು ಪೊಲೀಸರು ತಿಳಿಸಿದ್ದಾರೆ. ಇದು ದನ ಅಥವಾ ಕೋಳಿ ಸಾಗಾಟಕ್ಕೆ ಬಳಸುತ್ತಿದ್ದ ವಾಹನವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ನಂಬರ್ ಪ್ಲೇಟ್ ಆಧಾರದಲ್ಲಿ ವಾಹನದ ಮಾಲಕನನ್ನು ಠಾಣೆಗೆ ಕರೆದು ವಿಚಾರಿಸಿದಾಗ ತಾನು ತಿಂಗಳ ಮೊದಲೇ ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

NO COMMENTS

LEAVE A REPLY